ನಗೋಯಾ: ಏಷ್ಯನ್ ಗೇಮ್ಸ್ ಹಾಕಿಯಲ್ಲಿ(Hockey) ಭಾರತ ಸತತ ಎರಡನೇ ಬಾರಿ ಚಾಂಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಏಷ್ಯನ್ ಗೇಮ್ಸ್‌ನ ಪುರುಷರ ಹಾಕಿ ಫೈನಲ್‌ನಲ್ಲಿ ಭಾರತ ತಂಡವು ಮಲೇಷ್ಯಾವನ್ನು 5-1 ಅಂತರದಿಂದ ಧೂಳೀಪಟ ಮಾಡಿ ಇತಿಹಾಸ ನಿರ್ಮಿಸಿ ಚಿನ್ನಕ್ಕೆ ಮುತ್ತಿಟ್ಟಿದೆ.
ಶುಕ್ರವಾರ ಭಾರತದ ಮಹಿಳೆಯರು ಚೀನಾವನ್ನು ಸೋಲಿಸಿ ಚಿನ್ನವನ್ನು ಗೆದ್ದಿದ್ದರು. ಈ ಮೂಲಕ 44 ವರ್ಷದ ಬಳಿಕ ಪುರುಷರು ಮತ್ತು ಮಹಿಳೆಯರು ಜಂಟಿಯಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಏಷ್ಯನ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳೆರಡೂ ಒಟ್ಟಿಗೆ ಚಿನ್ನ ಗೆದ್ದಿರುವುದು ಇತಿಹಾಸದಲ್ಲೇ ಇದೇ ಮೊದಲು.
ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದರೆ, ಜುಗ್ರಾಜ್ ಸಿಂಗ್, ಹಾರ್ದಿಕ್ ಸಿಂಗ್ ಮತ್ತು ಶಿಲಾನಂದ್ ಲಾಕ್ರಾ ತಲಾ ಒಂದು ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು.
𝗖𝗔𝗣𝗧𝗔𝗜𝗡 𝗛𝗔𝗥𝗠𝗔𝗡𝗣𝗥𝗘𝗘𝗧 𝗟𝗘𝗔𝗗𝗦 𝗜𝗡𝗗𝗜𝗔 𝗧𝗢 𝗕𝗔𝗖𝗞-𝗧𝗢-𝗕𝗔𝗖𝗞 𝗔𝗦𝗜𝗔𝗡 𝗚𝗔𝗠𝗘𝗦 𝗚𝗢𝗟𝗗 𝗠𝗘𝗗𝗔𝗟𝗦! 🇮🇳🏆🥇
Harmanpreet Singh has made history by becoming the first Indian captain to lead the Men’s Hockey Team to two Asian Games gold medals, and… pic.twitter.com/bTIHUUsZAl
— Hockey India (@TheHockeyIndia) October 3, 2026
ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿದೆ.
ಮೊದಲಾರ್ಧ ಮುಗಿಯುವ ಮುನ್ನ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ಪರ ಜುಗ್ರಾಜ್ ಸಿಂಗ್ ಎರಡನೇ ಗೋಲು ಹೊಡೆದರು. ಮೂರನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ಸಿಕ್ಕಾಗ ಹಾರ್ದಿಕ್ ಸಿಂಗ್ ಅದನ್ನು ಯಶಸ್ವಿಯಾಗಿ ಗೋಲು ಪೆಟ್ಟಿಗೆಗೆ ಸೇರಿಸಿ ತಂಡಕ್ಕೆ 3-1 ಮುನ್ನಡೆ ನೀಡಿದರು.
𝗧𝗛𝗥𝗘𝗘 𝗔𝗦𝗜𝗔𝗡 𝗚𝗔𝗠𝗘𝗦 𝗚𝗢𝗟𝗗𝗦 𝗙𝗢𝗥 𝗠𝗔𝗡𝗣𝗥𝗘𝗘𝗧 𝗦𝗜𝗡𝗚𝗛! 🇮🇳🥇🏆
India’s most-capped player has made history, becoming the only Indian hockey player to win three Asian Games gold medals! 🔥
A historic achievement for an Indian hockey legend. 👏🇮🇳… pic.twitter.com/4083D8VI1V
— Hockey India (@TheHockeyIndia) October 3, 2026
ಪಂದ್ಯದ ಕೊನೆಯ ಕ್ವಾರ್ಟರ್‌ನಲ್ಲಿ ಶಿಲಾನಂದ್ ಲಾಕ್ರಾ ಅತ್ಯಾಕರ್ಷಕ ಫೀಲ್ಡ್ ಗೋಲು ಹೊಡೆಯುವ ಮೂಲಕ ಭಾರತದ ಸ್ಕೋರ್ ಅನ್ನು 4-1 ಕ್ಕೆ ಹೆಚ್ಚಿಸಿದರು. ಪಂದ್ಯ ಮುಕ್ತಾಯದ ಕೊನೆಯ ಹಂತದ ನಿಮಿಷಗಳಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅನ್ನು ಹರ್ಮನ್‌ಪ್ರೀತ್ ಸಿಂಗ್ ಡ್ರಾಗ್ ಫ್ಲಿಕ್ ಮೂಲಕ ಭರ್ಜರಿ ಗೋಲಾಗಿ ಪರಿವರ್ತಿಸಿ ಭಾರತಕ್ಕೆ 5-1 ಅಂತರದ ಐತಿಹಾಸಿಕ ಜಯ ತಂದುಕೊಟ್ಟರು.
Harmanpreet Singh steps up with a brilliant drag flick to put India 1-0 ahead against Malaysia! 💥
Watch the 20th Asian Games Aichi-Nagoya 2026 LIVE on Sony Sports Network TV channels & Sony LIV.#SonySportsNetwork #SonyLIV #AsianGames #AichiNagoya2026… pic.twitter.com/zn75KJWlvd
— Sony Sports Network (@SonySportsNetwk) October 3, 2026
ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತ ಪುರುಷರ ತಂಡವು ತನ್ನ ಚಾಂಪಿಯನ್ ಪಟ್ಟವನ್ನು (ಬ್ಯಾಕ್-ಟು-ಬ್ಯಾಕ್ ಗೋಲ್ಡ್) ಯಶಸ್ವಿಯಾಗಿ ರಕ್ಷಿಸಿಕೊಂಡಿರುವುದು ಇದೇ ಮೊದಲು. 2023ರ ಹ್ಯಾಂಗ್‌ಝೌ ಗೇಮ್ಸ್‌ನಲ್ಲೂ ಭಾರತವೇ ಚಿನ್ನ ಗೆದ್ದಿತ್ತು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡಕ್ಕೆ ಇದು 5ನೇ ಚಿನ್ನದ((1966, 1998, 2014, 2023 ಮತ್ತು 2026) ಪದಕವಾಗಿದೆ. ಭಾರತದ ಹಿರಿಯ ಆಟಗಾರ ಮನ್‌ಪ್ರೀತ್ ಸಿಂಗ್ ಮೂರು ಏಷ್ಯನ್ ಗೇಮ್ಸ್ ಹಾಕಿ ಚಿನ್ನದ ಪದಕ (2014, 2023, 2026) ಗೆದ್ದ ಏಕೈಕ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

