ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ ಕಟೌಟ್ (Dasara Lightings Cutout) ಏಕಾಏಕಿ ಮುರಿದು ಬಿದ್ದಿದೆ.

ಟಿಟಿ ವಾಹನದ ಮೇಲೆ ವಿದ್ಯುತ್ ದೀಪಾಲಂಕಾರದ (Dasara Lightings) ಕಟೌಟ್ ಬಿದ್ದಿದೆ ವಾಹನ ಚಾಲಕ ಅದೃಷ್ಟ ವಶಾತ್ ಪ್ರಾಣಾಪಾಯಾದಿಂದ ಪಾರಾಗಿದ್ದಾನೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಹಾಗೂ ಗುತ್ತಿಗೆ ಪಡೆದ ಮೋಹನ್ ಎಂಬ ವ್ಯಕ್ತಿಯ ಬೇಜವಾಬ್ದಾರಿತನದಿಂದ ಕಟೌಟ್ ಮುರಿದು ಬಿದ್ದಿದೆ. ಬೃಹತ್ ಲೈಟ್ ಕಟೌಟ್ ಗೆ ಅರ್ಧ ಅಡಿ ಗುಂಡಿ ತೆಗೆದು ಕಂಬ ಹಾಕಿದ ಕಾರಣ ಕಟೌಟ್ ಕೆಳಗೆ ಬಿದ್ದಿದೆ. ಇದನ್ನೂ ಓದಿ: ಟ್ರೆಕ್ಕಿಂಗ್ ವೇಳೆ ಈಜಲು ಹೋದ ಟೆಕ್ಕಿ ನಾಪತ್ತೆ

ಕಟೌಟ್ ಅಳವಡಿಸಿದ ನಾಲ್ಕೇ ದಿನಕ್ಕೆ ಮುರಿದು ಬಿದ್ದಿದೆ. ನೆಲಕ್ಕೆ ಅಪ್ಪಳಿಸಿದ ವಿದ್ಯುತ್ ದೀಪಾಲಂಕಾರದ ಕಟೌಟ್. ಇದನ್ನೂ ಓದಿ: ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

