ಮಳೆಗಾಲದ ಜಿಟಿ ಜಿಟಿ ಹನಿಗಳು, ಮೈಕೊರೆಯುವ ಚಳಿ… ಈ ಸುಂದರ ವಾತಾವರಣದಲ್ಲಿ ಭಾನುವಾರದ ಹೊತ್ತಲ್ಲಿ ಮನೆಯ ಕಿಟಕಿಯ ಬಳಿ ಕುಳಿತು ಬಿಸಿ-ಬಿಸಿಯಾಗಿ ಏನಾದರೂ ತಿನ್ನುವ ಮಜಾನೇ ಬೇರೆ! ಅಂಥಾ ಸಂದರ್ಭದಲ್ಲಿ ಹೊರಗೆ ಹೋಗಿ ತರಲು ಮಳೆ ಅಡ್ಡಿಯಾದರೆ ಚಿಂತೆ ಯಾಕೆ? ನೀವೇ ಮನೆಯಲ್ಲೇ ಹದವಾದ ಬಿಸಿ-ಬಿಸಿಯಾದ ಕ್ರಿಸ್ಪಿ ಚೀಸ್ ಬಾಲ್ಸ್ ತಯಾರಿಸಿ ಸವಿಯಬಹುದು.

ಬೇಕಾದ ಸಾಮಾಗ್ರಿಗಳು
* ತುರಿದುಕೊಂಡಿರುವ ಚೀಸ್
* ಬ್ರೆಡ್ ಕ್ರಮ್ಸ್
* ಮೈದಾ
* ಕೊತ್ತಂಬರಿ
* ಹಾಲು
* ಕಾರ್ನ್ ಪ್ಲೋರ್
* ಕಪ್ಪು ಮೆಣಸಿನ ಪುಡಿ
* ಚಿಲ್ಲಿ
* ಉಪ್ಪು
* ಎಣ್ಣೆ –

ಮಾಡುವ ವಿಧಾನ
* ಮೊದಲಿಗೆ ತುರಿದುಕೊಂಡಿರುವ ಚೀಸ್ ಅನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.
* ಅದಕ್ಕೆ ಬ್ರೆಡ್ ಕ್ರಮ್ಸ್, ಮೈದಾಹಿಟ್ಟು, ಕಾರ್ನ್ ಪ್ಲೋರ್, ಕರಿಮೆಣಸಿನ ಪುಡಿ, ಚಿಲ್ಲಿ ಪದರ, ಉಪ್ಪು ಮತ್ತು ಹಾಲನ್ನು ಹಾಕಿ ಕಲಸಿ.
* ನಂತರ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಒಂದೊಂದು ಉಂಡೆ ಮಾಡಿ ಇಟ್ಟುಕೊಳ್ಳಿ.
* ಉಂಡೆ ಮಾಡಿ ಇಟ್ಟುಕೊಂಡ ಬಾಲ್‍ಗಳನ್ನು ಮೈದಾ ಹಿಟ್ಟಿನೊಳಗೆ ರೋಲ್ ಮಾಡಿ, 20 ನಿಮಿಷ ಫ್ರಿಜ್ ನಲ್ಲಿಡಿ.
* ಇತ್ತ ಸ್ಟವ್ ಮೇಲೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ, ನಂತ್ರ ಕಾದ ಎಣ್ಣೆಗೆ ಬೋಂಡದ ರೀತಿಯ ಉಂಡೆಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ಆ ಬಳಿಕ ಬಾಣಲೆಯಿಂದ ತೆಗೆದು ಒಂದು ಪ್ಲೇಟ್ ಗೆ ಹಾಕಿ, ಚಳಿಯಲ್ಲಿ ಬಿಸಿ ಬಿಸಿ ಚೀಸ್ ಬಾಲ್ ಸವಿಯಿರಿ.

