ಚಿಕ್ಕಬಳ್ಳಾಪುರ: ಕಸ ವಿಂಗಡನೆ ಯಂತ್ರಕ್ಕೆ (Waste Segregation Machine) ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ (Doddaballapur) ಎಂಎಸ್ಜಿಪಿ ಘಟಕದಲ್ಲಿ ನಡೆದಿದೆ.
ಕಾಡತಿಪ್ಪೂರು ಮೂಲದ ಅರಸಮ್ಮ(45) ಮೃತ ದುರ್ದೈವಿ. ಯಂತ್ರದ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮಹಿಳೆ ಸಿಲುಕಿ ಸಾವನ್ನಪ್ಪಿದ್ದಾರೆ. ಯಂತ್ರಕ್ಕೆ ಮಹಿಳೆ ಸಿಲುಕಿದ ಪರಿಣಾಮ, ಕೈ ಕಾಲು ತುಂಡಾಗಿ ಬಿದ್ದಿದ್ದವು. ಇದನ್ನೂ ಓದಿ: ಕಿಡ್ನ್ಯಾಪ್ ನಾಟಕವಾಡಿ 90 ಲಕ್ಷಕ್ಕೆ ಡಿಮ್ಯಾಂಡ್ – ತಂದೆಗೆ ಯಾಮಾರಿಸಲು ಯತ್ನಿಸಿದ ಮಗ ಅರೆಸ್ಟ್
ಮಹಿಳೆ ಈ ಘಟಕದಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನ ಕಸವನ್ನ ತಂದು ಈ ಘಟಕದಲ್ಲಿ ವಿಂಗಡಣೆ ಮಾಡಲಾಗುತ್ತಿತ್ತು. ಇಂದು (ಅ.2) ಬೆಳಗ್ಗೆ ಕಸ ವಿಂಗಡಣೆ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.
ದೊಡ್ಡಬೆಳವಂಗಲ ಪೋಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ. ಇದನ್ನೂ ಓದಿ: ಶಿಕಾರಿಗೆ ತೆರಳಿದ್ದಾಗ ಮಿಸ್ಫೈರ್ – ಯುವಕ ಸಾವು, ಮೂವರ ಬಂಧನ, ಮೂವರು ನಾಪತ್ತೆ

