– ಇರಾನ್ ಕೈವಾಡ ಇದ್ರೆ, ಅತ್ಯಂತ ಭೀಕರ ದಾಳಿ ಎಚ್ಚರಿಕೆ ಕೊಟ್ಟ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ (Flydubai) ವಿಮಾನದಲ್ಲಾದ ಘಟನೆಗೂ ಇರಾನ್‌ಗೂ ಸಂಬಂಧವಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಳಿವು ನೀಡಿದ್ದಾರೆ.
ಈ ಸಂಬಂಧ ತನಿಖೆ ಇನ್ನೂ ನಡೆಯುತ್ತಿದ್ದರೂ, ತಮಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಪ್ರತಿಕ್ರಿಯಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಕು ಅಲ್ಲ ಒಮಾನ್ ಪೈಲಟ್ ಮಚ್ಚರ್‌ಗೆ ಹೊಡೆದಿದ್ದು ಕೊಡಲಿಯಿಂದ!
‘ಫ್ಲೈದುಬೈ’ (flydubai) ದಾಳಿಕೋರ ಮತ್ತು ಇರಾನ್ ನಡುವೆ ಇರಬಹುದಾದ ಸಂಪರ್ಕದ ಕುರಿತು ಯಾರಾದರೂ ತಮಗೆ ಮಾಹಿತಿ ನೀಡಿದ್ದಾರೆಯೇ ಎಂದು ಪತ್ರಕರ್ತರೊಬ್ಬರು ಟ್ರಂಪ್‌ಗೆ ಪ್ರಶ್ನೆ ಕೇಳಿದರು. ‘ನಮ್ಮ ತಂಡವು ಈ ವಿಷಯವನ್ನು ಪರಿಶೀಲಿಸುತ್ತಿದೆ’ ಎಂದು ಟ್ರಂಪ್ ಉತ್ತರಿಸಿದ್ದಾರೆ.
ನಾವು ಸದ್ಯಕ್ಕೆ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಈ ವಿಷಯದಲ್ಲಿ ನಾವು ಸಂಪೂರ್ಣ ಪಾರದರ್ಶಕವಾಗಿರುತ್ತೇವೆ. ನನಗೆ ಕೇಳಿಬರುತ್ತಿರುವ ಮಾಹಿತಿಯ ಆಧಾರದ ಮೇಲೆ ಹೇಳುವುದಾದರೆ, ಅದಕ್ಕೆ ಉತ್ತರ ‘ಹೌದು’ ಎಂದೇ ಆಗಿರುತ್ತದೆ. ಆದರೆ, ನಾವು ಈಗ ಅದರ ಬಗ್ಗೆ ಕೆಲಸ ಮಾಡುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಆಕ್ರಮಣಕ್ಕೆ ಇರಾನ್ ಹೊಣೆಗಾರನಾಗಿದ್ದರೆ ಅಮೆರಿಕವು ಪ್ರತಿದಾಳಿ ನಡೆಸುತ್ತದೆಯೇ ಎಂಬ ಪ್ರಶ್ನೆಗೆ ಟ್ರಂಪ್, ಓ, ಅವರಿಗೆ ತೀವ್ರವಾದ ಹೊಡೆತ ಬೀಳಲಿದೆ, ಚಿಂತಿಸಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಿಜವಾದ ಹೀರೋ, ಚಾಕು ಇರಿತಕ್ಕೆ ಒಳಗಾದ್ರೂ 180 ಪ್ರಯಾಣಿಕರ ಜೀವ ಉಳಿಸಿದ್ರು: ಭಾರತೀಯ ಪೈಲಟ್‌ಗೆ ನೆತನ್ಯಾಹು ಸೆಲ್ಯೂಟ್
ಫ್ಲೈದುಬೈ ವಿಮಾನ ಹಾರಾಟದ ವೇಳೆಯೇ ಭಾರತೀಯ ಪೈಲಟ್ ಕ್ಯಾಪ್ಟನ್ ಮೇಲೆ ಸಹಪೈಲಟ್ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ, ಸಮಯಪ್ರಜ್ಞೆಯಿಂದ ಭಾರತೀಯ ಪೈಲಟ್ 180 ಪ್ರಯಾಣಿಕರ ಜೀವ ಉಳಿಸಿದರು. ಅಂತಿಮವಾಗಿ ಫ್ಲೈಟ್ ಅನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. ಈ ಪ್ರಕರಣದಲ್ಲಿ ಇರಾನ್‌ನ ಭಾಗವಹಿಸುವಿಕೆಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಸಾಕ್ಷ್ಯವಿಲ್ಲ.

