– ದೇಶದಲ್ಲಿ ಶೇ.51ರಷ್ಟು ಮಳೆ ಕೊರತೆ
– ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಮಳೆ
ನವದೆಹಲಿ: ಸೆ.19ರಿಂದ ಮುಂಗಾರು ಮಳೆ (Monsoon Rain) ನಿರ್ಗಮನ ಪ್ರಕ್ರಿಯೆ ಶುರುವಾಗಿದ್ದು, ಅಕ್ಟೋಬರ್ 15ಕ್ಕೆ ಅಂತ್ಯವಾಗಲಿದೆ.
ಎಲ್ನಿನೋ (El Nino) ಎಫೆಕ್ಟ್ನಿಂದಾಗಿ ಈಬಾರಿ ದೇಶದಲ್ಲಿ ಶೇ.51ರಷ್ಟು ಮಳೆ ಕೊರತೆಯಾಗಿದೆ. ಇದು 17 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಕಂಡ ವರ್ಷವಾಗಿದೆ. ಹಾಗಾಗಿ, 1950ರ ಬಳಿಕ 76 ವರ್ಷಗಳಲ್ಲೇ ಅತ್ಯಂತ ಒಣಹವೆ ಕಂಡ ವರ್ಷವಾಗಿದೆ. ವಾಡಿಕೆಯಂತೆ ಕರ್ನಾಟಕದಲ್ಲಿ 814.2 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ 570.3 ಮಿ.ಮೀ. ಮಳೆ ಆಗಿದೆ. ಹಾಗಾಗಿ, ಶೇ.30ರಷ್ಟು ಮಳೆ ಕೊರತೆಯಾಗಿದೆ. ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ ಹಗರಣ: ಹೈಕೋರ್ಟ್ ಎಸ್ಐಟಿ ತನಿಖೆ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ
ಇದೇ ರೀತಿ ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಅದರಲ್ಲೂ ಮೇಘಾಲಯದಲ್ಲಂತೂ ಶೇ.61ರಷ್ಟು ಮಳೆ ಅಭಾವವಾಗಿದೆ. ಲಡಾಖ್ 123%, ದಾದರ್-ನಗರ್ ಹವೇಲಿ, ಡಿಯು-ದಮನ್ಗಳಲ್ಲಿ 37% ಹಾಗೂ ಒಡಿಶಾದಲ್ಲಿ ಶೇ.30ರಷ್ಟು ಹೆಚ್ಚುವರಿ ಮಳೆಯಾಗಿದೆ. ಹಾಗಾಗಿ, ಇಡೀ ದೇಶದಲ್ಲೇ ಈ ವರ್ಷವನ್ನು ಬರಗಾಲ ಅಂತ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ. ಇದನ್ನೂ ಓದಿ: ಪೋಕ್ಸೋ ಆರೋಪಿ ಸಂಬಂಧಿಗಳಿಂದ ಕಿರುಕುಳ ಆರೋಪ – ದೂರುದಾರ ಆತ್ಮಹತ್ಯೆ

