ಬೆಂಗಳೂರು: ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳೀದ್ದಾರೆ.
ವಿಧಾನಸೌಧದಲ್ಲಿ ಉರ್ದು ಹಬ್ಬ ಆಚರಣೆಗೆ ವಿಧಾನ ಪರಿಷತ್ ಛಲವಾದಿ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಅವರು, ಎಂದೂ ಇಲ್ಲದ ಈ ಪದ್ದತಿಯನ್ನು ಯಾಕೆ ಮಾಡುತ್ತಿದ್ದೀರಿ? ಇದು ಓಲೈಕೆ ರಾಜಕಾರಣ ಅಲ್ಲವೇ?ವೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಕರ್ನಾಟಕದ ಗೌರವ ಕಳೆಯುವ ಕೆಲಸ ಮಾಡುತ್ತಿದೆ ಅಂತ ಕಿಡಿಕಾರಿದರು. ಇದನ್ನೂ ಓದಿ: ರೈತರಿಗೆ 25 ಸಾವಿರ ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ಭಾಗಿ- ಛಲವಾದಿ
ಕಾಂಗ್ರೆಸ್ ಸರ್ಕಾರ ಎಂದರೆ ತಾಲಿಬಾನ್ ಸರ್ಕಾರ ಎಂದು ಜನ ಮಾತಾಡುತ್ತಿದ್ದಾರೆ. ನೀವು ಕೂಡಾ ಅದಕ್ಕೆ ಒತ್ತು ಕೊಡುವ ಕೆಲಸವನ್ನೇ ಮಾಡುತ್ತಿದ್ದೀರಿ. ನೀವು ಯಾಕೆ ಈ ಮನಸ್ಥಿತಿ ಬೆಳೆಸಿಕೊಂಡಿದ್ದೀರಿ? ಇದು ಖಾದರ್ ಈವೆಂಟ್. ಖಾದರ್ ನನಗಿಂತ ದೊಡ್ಡ ತೀರ್ಪುಗಾರ ಇಲ್ಲ ಎಂದು ತಿಳಿದುಕೊಂಡಿದ್ದಾರೆ. ವಿಧಾನಸೌಧದಲ್ಲಿ ಒಂದು ರೀತಿ ತಾಲಿಬಾನಿ ರೀತಿ ಖಾದರ್ ನಡೆದುಕೊಂಡಿದ್ದರು. ಅವರ ತೀರ್ಮಾನಗಳು ಅವರ ಧರ್ಮ, ಅವರ ಜಾತಿ ಇವುಗಳ ಪರವಾಗಿಯೇ ಇರುತ್ತಿತ್ತು. ನಿಮ್ಮ ಈ ರೀತಿಯ ನಿರ್ಧಾರಗಳು ಮುಂದೆ ಕಾಂಗ್ರೆಸ್ನ್ನು ನುಂಗಬಹುದು. ಕಾಂಗ್ರೆಸ್ ನಾಶ ಮಾಡಲೆಂದೇ ನೀವು ಹುಟ್ಟಿದ್ದೀರಿ ಅಂತ ಕಿಡಿಕಾರಿದರು. ಇದನ್ನೂ ಓದಿ: ಸಚಿವ ಬಾಲಕೃಷ್ಣ ನಕಲಿ ದಾಖಲೆ ಸೃಷ್ಟಿಸಿ 36 ಎಕರೆ ಜಾಗ ಕಬಳಿಸಿದ್ದಾರೆ: ಮಂಜುನಾಥ್

