ತಿರುವನಂತಪುರಂ: ವಿವಾಹಿತ ಸ್ನೇಹಿತನ ಜೊತೆ ಲಾಡ್ಜ್ಗೆ ತೆರಳಿದ್ದ ಮಹಿಳೆಯ (Woman) ಅತ್ಯಾಚಾರಕ್ಕೆ ಆತನ ಪತ್ನಿಯೇ ಸುಪಾರಿ ಕೊಟ್ಟ ಪ್ರಕರಣ ಕೇರಳಂನ (Keralam) ತ್ರಿಶೂರ್ನಲ್ಲಿ ನಡೆದಿದೆ.
ತಮಿಳುನಾಡಿನ (Tamil Nadu) ತಿರುಪ್ಪೂರ್ ಮೂಲದ ಮಹಿಳೆಯೊಬ್ಬಳು ತನ್ನ ಸ್ನೇಹಿತನೊಂದಿಗೆ ಕೇರಳದ ತ್ರಿಶೂರ್ಗೆ ತೆರಳಿದ್ದಳು. ಅಲ್ಲಿ ಕೆಎಸ್ಆರ್ಟಿಸಿ (KSRTC) ಬಸ್ ನಿಲ್ದಾಣದ ಸಮೀಪವಿರುವ ಲಾಡ್ಜ್ ಒಂದರಲ್ಲಿ ಇಬ್ಬರೂ ತಂಗಿದ್ದರು. ಈ ವೇಳೆ ಪೊಲೀಸರಂತೆ ನಟಿಸಿದ ಐವರು ದುಷ್ಕರ್ಮಿಗಳು, ಬಲವಂತವಾಗಿ ಅವರ ಹೋಟೆಲ್ ಕೊಠಡಿಯನ್ನು ಪ್ರವೇಶಿಸಿ, ಇಬ್ಬರ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಇಬ್ಬರನ್ನು ಅಪಹರಿಸಿದ್ದರು. ಇದನ್ನೂ ಓದಿ: ದೆಹಲಿ-ಎನ್ಸಿಆರ್ ಅತ್ಯಾಚಾರ ಕೇಸ್ – ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂಕೋರ್ಟ್
ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ಯುವ ಮಾರ್ಗದುದ್ದಕ್ಕೂ ಮಹಿಳೆಯ ಸ್ನೇಹಿತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಆತನ ಕೈಕಾಲುಗಳು ಮುರಿದ ಬಳಿಕ ತಿರುಪ್ಪೂರ್ನ ಆಸ್ಪತ್ರೆಯ ಆವರಣವೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಇಬ್ಬರು ದುಷ್ಕರ್ಮಿಗಳು ಮಹಿಳೆಯನ್ನು ಮತ್ತೊಂದು ಕಾರಿಗೆ ಹತ್ತಿಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಅತ್ಯಾಚಾರಕ್ಕೊಳಗಾದ ಮಹಿಳೆ ನೀಡಿದ ಮಾಹಿತಿಯ ಆಧಾರದ ಮೇಲೆ, ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣವನ್ನು ಕೇರಳಂನ ತ್ರಿಶೂರ್ ನಗರ ಪೊಲೀಸರಿಗೆ ಹಸ್ತಾಂತರಿಸಿದ್ದರು. ತನಿಖೆ ವೇಳೆ ಮಹಿಳೆಯ ಸ್ನೇಹಿತನ ಪತ್ನಿಯೇ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಪತಿಯ ಫೋನ್ ಲೊಕೇಶನ್ ಟ್ರ್ಯಾಕ್ ಮಾಡಿ ಆ ಮಾಹಿತಿಯನ್ನು ದುಷ್ಕರ್ಮಿಗಳಿಗೆ ರವಾನಿಸಿದ್ದಳು ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವೈದ್ಯನಿಂದ ಯುವತಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ; FIR ದಾಖಲು

