ಗುವಾಹಟಿ: ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್(Shubman Gill) ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ಹೆಸರು ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ದ್ವಿಶತಕ (Double Century) ಸಿಡಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಕೇವಲ ಎರಡನೇ ಕ್ರಿಕೆಟಿಗ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
27 ವರ್ಷದ ಗಿಲ್ ಈ ಹಿಂದೆ 2023ರ ಜನವರಿಯಲ್ಲಿ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಚೊಚ್ಚಲ ದ್ವಿಶತಕ ಬಾರಿಸಿದ್ದರು. ಇದೀಗ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಅದೇ ಇತಿಹಾಸವನ್ನು ಪುನರಾವರ್ತಿಸಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೂರು ದ್ವಿಶತಕ ಸಿಡಿಸಿರುವ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ (2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ, 2014 ಮತ್ತು 2017ರಲ್ಲಿ ಶ್ರೀಲಂಕಾ ವಿರುದ್ಧ). ಈಗ ಎರಡು ದ್ವಿಶತಕಗಳನ್ನು ಸಿಡಿಸಿರುವ ಗಿಲ್, ರೋಹಿತ್ ಶರ್ಮಾ ನಂತರ ಈ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ.
𝗗𝗢𝗨𝗕𝗟𝗘 𝗖𝗘𝗡𝗧𝗨𝗥𝗬 🤩🔥#ShubmanGill brings up his 2nd ODI double ton, becoming the fastest to do so in the history of the format! 💯
Records tonight, and a whole lot more to look forward to when the #CWC27 schedule launches TOMORROW! 🏆#INDvWI | 2nd ODI 👉… pic.twitter.com/E4tvOzYVqP
— Star Sports (@StarSportsIndia) September 30, 2026
ವೆಸ್ಟ್ ಇಂಡೀಸ್ ನೀಡಿದ್ದ 406 ರನ್‌ಗಳ ಹಿಮಾಲಯದಂತಹ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ನಾಯಕ ಗಿಲ್ ಬಿರುಸಿನ ಆರಂಭ ನೀಡಿದರು. ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ನಂತರ ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಕೇವಲ 117 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಸಂಭ್ರಮಿಸಿದರು.
ಇನ್ನಿಂಗ್ಸ್ ಆರಂಭಿಸಿದ ಅನುಭವಿ ರೋಹಿತ್ ಶರ್ಮಾ 101 ರನ್(75 ಎಸೆತ) ಮತ್ತು ಗಿಲ್ ಮೊದಲ ವಿಕೆಟ್‌ಗೆ ಬರೋಬ್ಬರಿ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಇದು ಭಾರತದ ಏಕದಿನ ಇತಿಹಾಸದಲ್ಲೇ ಆರಂಭಿಕ ಜೋಡಿಯ 2ನೇ ಅತ್ಯಧಿಕ ರನ್ ಜೊತೆಯಾಟವಾಗಿದೆ. ರೋಹಿತ್ ಔಟಾದ ನಂತರ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ (19 ಎಸೆತಗಳಲ್ಲಿ 29 ರನ್) ಜೊತೆಗೂಡಿದ ಗಿಲ್, ಕೇವಲ 35 ಎಸೆತಗಳಲ್ಲಿ 65 ರನ್‌ಗಳ ಅಮೂಲ್ಯ ಪಾಲುದಾರಿಕೆ ನೀಡಿದರು.
VINTAGE HITMAN ON DISPLAY! 🙌
That celebration said it all – pure joy from #RohitSharma tonight! 🤩
As the runs keep flowing tonight, the wait for the big #CWC27 schedule launch ends tomorrow! 🏆#INDvWI | 2nd ODI 👉 https://t.co/hOOhJILBTl pic.twitter.com/SL2DGGQqYg
— Star Sports (@StarSportsIndia) September 30, 2026
ಈ ಪಂದ್ಯದಲ್ಲಿ ಗಿಲ್ ಮತ್ತೊಂದು ಪ್ರಮುಖ ಮೈಲಿಗಲ್ಲು ಸ್ಥಾಪಿಸಿದ್ದಾರೆ. 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಇಶಾನ್ ಕಿಶನ್ 103 ಎಸೆತಗಳಲ್ಲಿ ವೇಗವಾಗಿ 150 ರನ್ ಗಳಿಸಿದ್ದರು. ಆದರೆ ಗಿಲ್ ಕೇವಲ 89 ಎಸೆತಗಳಲ್ಲೇ 150 ರನ್ ಪೂರೈಸುವ ಮೂಲಕ ಏಕದಿನದಲ್ಲಿ ಅತಿ ವೇಗವಾಗಿ 150 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ನೂತನ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೇ 117 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ವೇಗವಾಗಿ 200 ರನ್ ಹೊಡೆದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದೆ ಈ ದಾಖಲೆ ಇಶನ್ ಕಿಶನ್ ಹೆಸರಿನಲ್ಲಿತ್ತು . ಇಶನ್ ಕಿಶನ್ 126 ಎಸೆತಗಳಲ್ಲಿ ಬಾಂಗ್ಲಾದೇಶದ ವಿರುದ್ಧ ದ್ವಿಶತಕ ಹೊಡೆದಿದ್ದರು.
ಅತ್ಯುತ್ತಮವಾಗಿ ಆಡಿದ ಶುಭಮನ್ ಗಿಲ್ ಅಂತಿಮವಾಗಿ 133 ಎಸೆತಗಳಲ್ಲಿ ಅಜೇಯ 223 ರನ್(26 ಬೌಂಡರಿ, 8 ಸಿಕ್ಸ್) ಸಿಡಿಸಿ ತಂಡಕ್ಕೆ ಅಮೂಲ್ಯ ಜಯವನ್ನು ತಂದುಕೊಟ್ಟರು.

