ಬೆಂಗಳೂರು: ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೀಪಾ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಫಸ್ಟ್ ಇಯರ್ ಬಿಕಾಂ ಓದುತ್ತಿದ್ದ 19 ವರ್ಷದ ಯೋಗೀಶ್ ಕೊಲೆಯಾದ ವಿದ್ಯಾರ್ಥಿ.
ಯೋಗೀಶ್ ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಿದ್ದ. ಜೊತೆಗೆ ಉತ್ತಮ ಡಾನ್ಸರ್ ಕೂಡ ಆಗಿದ್ದ.
ಇಂದು ಎಂದಿನಂತೆ ಯೋಗೀಶ್ ಕಾಲೇಜಿಗೆ ಬಂದಿದ್ದ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಯೋಗೀಶ್ಗೆ ಫೋನ್ ಮಾಡಿ, ಹೊರಗೆ ಬಂದು ಮಾತನಾಡುವಂತೆ ಹೇಳಿದ್ದಾನೆ.
ಕಾಲೇಜಿನ ಹಿಂಭಾಗದಲ್ಲಿರುವ ಜಿಮ್ವೊಂದರ ಬಳಿ ಯೋಗೀಶ್ ಬಂದಿದ್ದಾನೆ. ಅಲ್ಲಿ ಆತನೊಂದಿಗೆ ಮಾತನಾಡಲು ಏಳೆಂಟು ಮಂದಿ ಬಂದಿದ್ದರು. ಇದೇ ವೇಳೆ ಯೋಗೀಶ್ ಸ್ನೇಹಿತರು ಹಾಗೂ ಮತ್ತೊಂದು ಗುಂಪಿನ ನಡುವೆ ಯಾವುದೋ ವಿಚಾರಕ್ಕೆ ಏಕಾಏಕಿ ಗಲಾಟೆ ನಡೆದಿದೆ. ಇದನ್ನೂ ಓದಿ: ಬರ ಪರಿಹಾರ ನೀಡಿಲ್ಲ, ಬೇಡಿಕೆ ಈಡೇರಿಸಿಲ್ಲ; ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಆರ್. ಅಶೋಕ್
ಗಲಾಟೆ ನಡೆಯುತ್ತಿದ್ದ ವೇಳೆ ಗುಂಪಿನಲ್ಲಿದ್ದ ಓರ್ವ ವಿದ್ಯಾರ್ಥಿ ಏಕಾಏಕಿ ಚಾಕು ತೆಗೆದು ಯೋಗೀಶ್ನ ಎದೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯೋಗೀಶ್ನನ್ನು ಸ್ನೇಹಿತರು ಬೈಕ್ನಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇದನ್ನೂ ಓದಿ: ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರದ ಮೊದಲ ಹಾಡು ರಿಲೀಸ್
ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೀಶ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

