ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಬುದ್ಗಾಮ್ ಜಿಲ್ಲೆಯಲ್ಲಿ (Budgam Encounter) ಮಂಗಳವಾರ ಸಂಜೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾದ ಉನ್ನತ ಭಯೋತ್ಪಾದಕನೊಬ್ಬ ಸಾವನ್ನಪ್ಪಿದ್ದಾನೆ.
ಆ ಭಯೋತ್ಪಾದಕನನ್ನು ಲಷ್ಕರ್-ಎ-ತೊಯ್ಬಾದ ಉನ್ನತ ಕಮಾಂಡರ್ ಫೌಜಿ ಮೂಸಾ ಎಂದು ಗುರುತಿಸಲಾಗಿದೆ.
X ನಲ್ಲಿ ಪೋಸ್ಟ್ ಮಾಡಿದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್, ಆಪರೇಷನ್ ಕೊರಾಗ್ ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯನ್ನು ಸೇನೆ, ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ಬುಡ್ಗಾಮ್‌ನ ಯೂಸ್ಮಾರ್ಗ್ ಬಳಿಯ ಕೊರಾಗ್‌ನಲ್ಲಿ ನಡೆಸಿದೆ ಎಂದು ಹೇಳಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕೊರಾಗ್ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದ್ದವು. ಈ ವೇಳೆ ಅನುಮಾನಾಸ್ಪದ ಚಲನವಲನ ಗಮನಕ್ಕೆ ಬಂದಿದ್ದು, ಪಡೆಗಳು ಸವಾಲು ಹಾಕಿದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.
ಹತ್ಯೆಯಾದ ಉಗ್ರನನ್ನು ಅಧಿಕಾರಿಗಳು ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ ಎಂದು ಗುರುತಿಸಿದ್ದಾರೆ. ಜಮ್ಮು-ಕಾಶ್ಮೀರದ ಹಲವು ದಾಳಿಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಮೂಸಾ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: Asian Games 2026: ಭಾರತಕ್ಕೆ 9ನೇ ಚಿನ್ನದ ಪದಕ – ಕಾಂಪೌಂಡ್ ಆರ್ಚರಿ ಮಿಶ್ರ ತಂಡಕ್ಕೆ ರೋಚಕ ಜಯ
ಇದೇ ತಿಂಗಳ ಸೆಪ್ಟೆಂಬರ್ 5ರಂದು ಯೂಸ್ಮರ್ಗ್ ಬೆಟ್ಟಗಳಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಿಂದ ಮೂಸಾ ತಪ್ಪಿಸಿಕೊಂಡಿದ್ದ. ಆ ಕಾರ್ಯಾಚರಣೆಯಲ್ಲಿ ಆತನ ಆಪ್ತ ಸಹಾಯಕ ಯಾಸಿರ್ ಹತನಾಗಿದ್ದನು.
ಎನ್‌ಕೌಂಟರ್ ಬಳಿಕವೂ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಭದ್ರತಾ ಪಡೆಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪರಿಶೀಲನೆ ನಡೆಸುತ್ತಿವೆ.ಇದನ್ನೂ ಓದಿ: ಉಪ್ಪು, ಸಕ್ಕರೆ ಬಳಿಕ ಈಗ ಅಡುಗೆ ಎಣ್ಣೆ ಬಳಕೆಗೆ ಮಾರ್ಗಸೂಚಿ

