ನಗೋಯಾ: ಪುರುಷರ ಕಾಂಪೌಂಡ್ ಆರ್ಚರಿ ಫೈನಲ್ ಪಂದ್ಯದಲ್ಲಿ ಚೀನಾವನ್ನು (China) 238-237 ಅಂತರದಿಂದ ಸೋಲಿಸಿ ಭಾರತ ಪುರುಷರ ತಂಡ ಚಿನ್ನದ ಪದಕ ಪಡೆದುಕೊಂಡಿದೆ. ಈ ಮೂಲಕ ಆರ್ಚರಿಯಲ್ಲಿ ಭಾರತ ಹ್ಯಾಟ್ರಿಕ್ ಚಿನ್ನ ತನ್ನದಾಗಿಸಿಕೊಂಡಿದೆ.
ಐಜಿ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಕಂಪೌಂಡ್ ಆರ್ಚರಿ (Compound Archery) ವಿಭಾಗದಲ್ಲಿ ಭಾರತವು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಸಾಹಿಲ್ ಜಾದವ್, ಕುಶಾಲ್ ದಲಾಲ್ ಮತ್ತು ತಿರುಮೂರು ಗಣೇಶ್ ಮಣಿ ರತ್ನಂ ಅವರಿದ್ದ ತಂಡವು ಉತ್ತಮ ಪ್ರದರ್ಶನ ನೀಡಿ, ಭಾರತಕ್ಕೆ 10ನೇ ಚಿನ್ನದ ಪದಕವನ್ನು ತಂದುಕೊಟ್ಟಿದೆ. ಇದನ್ನೂ ಓದಿ: Asian Games 2026: ಭಾರತಕ್ಕೆ 9ನೇ ಚಿನ್ನದ ಪದಕ – ಕಾಂಪೌಂಡ್ ಆರ್ಚರಿ ಮಿಶ್ರ ತಂಡಕ್ಕೆ ರೋಚಕ ಜಯ
It’s raining golds here at the Archery Arena as the men’s compound team defeats China 238-237#AsianGames pic.twitter.com/Dgi7e1aJmU
— RevSportz Global (@RevSportzGlobal) September 30, 2026
ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಭಾರತದ ಸಾಧನೆ ಮುಂದುವರಿದಿದ್ದು, ಫೈನಲ್ನಲ್ಲಿ ಚೀನಾವನ್ನು 238-237 ಅಂತರದಿಂದ ಸೋಲಿಸುವ ಮೂಲಕ ಮತ್ತೊಂದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಈಗಾಗಲೇ ಕಂಪೌಂಡ್ ಆರ್ಚರಿಯಲ್ಲಿ ಮಹಿಳೆಯರು ಹಾಗೂ ಮಿಶ್ರ ತಂಡವು ಚಿನ್ನ ಪಡೆದುಕೊಂಡಿದ್ದು, ಪುರುಷರ ಗೆಲುವಿನೊಂದಿಗೆ ಭಾರತ ಹ್ಯಾಟ್ರಿಕ್ ಚಿನ್ನ ಪಡೆದುಕೊಂಡಿದೆ.
ಇದಕ್ಕೂ ಮುನ್ನ ಮಹಿಳೆಯರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಪ್ರೀಥಿಕಾ ಪ್ರದೀಪ್, ಜ್ಯೋತಿ ಸುರೇಖಾ ವೆನ್ನಮ್ ಮತ್ತು ಚಿಕಿತಾ ತನಿಪರ್ಥಿ ಅವರು ಭಾರತಕ್ಕೆ 7ನೇ ಪದಕ ತಂದುಕೊಟ್ಟರೆ, ಸಾಹಿಲ್ ಜಾದವ್ ಮತ್ತು ಚಿಕಿತಾ ತನಿಪರ್ಥಿ ಅವರಿದ್ದ ಕಾಂಪೌಂಡ್ ಆರ್ಚರಿ ಮಿಶ್ರ ತಂಡವು ಭಾರತಕ್ಕೆ 9ನೇ ಪದಕ ತಂದುಕೊಟ್ಟಿದೆ.
ಈ ಮೂಲಕ ಭಾರತ ಒಟ್ಟು 10 ಚಿನ್ನ, 21 ಬೆಳ್ಳಿ ಹಾಗೂ 27 ಕಂಚಿನ ಪದಕ ಪಡೆದುಕೊಂಡಿದ್ದು, ಒಟ್ಟು 58 ಪದಕ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: Asian Games | ಆರ್ಚರಿಯಲ್ಲಿ ಭಾರತಕ್ಕೆ ಚಿನ್ನ – 7ನೇ ಪದಕಕ್ಕೆ ಮುತ್ತಿಕ್ಕಿದ ವನಿತೆಯರು

