ನಗೋಯಾ: ಮಹಿಳೆಯರ ಕಾಂಪೌಂಡ್ ಆರ್ಚರಿ ಫೈನಲ್ ಪಂದ್ಯದಲ್ಲಿ ಚೀನಾವನ್ನು (China) 238-234 ಅಂತರದಿಂದ ಸೋಲಿಸಿ ಭಾರತ (India) ತನ್ನ 7ನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಐಚಿ-ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಮಹಿಳೆಯರ ಕಾಂಪೌಂಡ್ ಆರ್ಚರಿ (Compound Archery) ತಂಡದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಚೀನಾವನ್ನು 238-234 ಅಂತರದಿಂದ ಸೋಲಿಸುವ ಮೂಲಕ ಮತ್ತೊಂದು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತ ಒಟ್ಟು 7 ಚಿನ್ನದ ಪದಕಗಳನ್ನು ಪಡೆದುಕೊಂಡಿದೆ. ಇದನ್ನೂ ಓದಿ: 4*400 ರಿಲೇಯಲ್ಲಿ ಮಹಿಳೆಯರಿಗೆ ಚಿನ್ನ, ಪುರುಷರಿಗೆ ಕಂಚು
A spectacular performance for India! 🇮🇳
Many congratulations to Jyothi Surekha Vennam, Prithika Pradeep and Taniparthi Chikitha on winning Gold🥇in the Women’s Compound Team Archery event at #AsianGames2026.
Equalling the World Record makes this triumph even more special. The… pic.twitter.com/PCSNcqKE3A
— Mallikarjun Kharge (@kharge) September 30, 2026
ಪ್ರೀಥಿಕಾ ಪ್ರದೀಪ್, ಜ್ಯೋತಿ ಸುರೇಖಾ ವೆನ್ನಮ್ ಮತ್ತು ಚಿಕಿತಾ ತನಿಪರ್ಥಿ ಅವರಿದ್ದ ತಂಡವು ಫೈನಲ್‌ನ ನಾಲ್ಕು ಸುತ್ತುಗಳಲ್ಲಿಯೂ ಪ್ರಾಬಲ್ಯ ಸಾಧಿಸಿತು. ಚೀನಾ ತಂಡಕ್ಕೆ ಅವಕಾಶ ನೀಡಲೇ ಇಲ್ಲ. ಅತ್ಯುತ್ತಮ ಪ್ರದರ್ಶನ ನೀಡಿ, ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲರಾದರು.
ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ ಭಾರತ:
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಸುತ್ತಿನಿಂದಲೇ ಅಬ್ಬರಿಸಿತು. ಮೊದಲ ಸುತ್ತಿನಲ್ಲಿ 60-58 ಅಂತರದ ಮುನ್ನಡೆ ಸಾಧಿಸಿತು. ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡಿತು.ಇದನ್ನೂ ಓದಿ: Asian Games | 5ನೇ ಚಿನ್ನದ ಪದಕಕ್ಕೆ ಭಾರತ ಶೂಟ್ – ನೀರು ಧಂಡಾ ಸಾಧನೆ
A golden triumph for Indian archery as Jyothi Surekha Vennam, Prithika Pradeep and Chikitha Taniparthi secure the Gold Medal in the Women’s Compound Team event at the Asian Games 2026.
Congratulations to the champion trio on this outstanding performance. Their precision,… pic.twitter.com/1LHm71ka3e
— Rajnath Singh (@rajnathsingh) September 30, 2026
ಕೊನೆಯ ಸುತ್ತಿನಲ್ಲಿ 10 ಅಂಕಗಳನ್ನು ಗಳಿಸುವ ಮೂಲಕ ಚೀನಾ ವಿರುದ್ಧ 238-234ರ ರೋಚಕ ಜಯ ಸಾಧಿಸಿ, ವಿಶ್ವ ದಾಖಲೆ ಸರಿಗಟ್ಟಿದ್ದರು.
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇದು ಏಳನೇ ಚಿನ್ನದ ಪದಕವಾಗಿದ್ದು, ಒಟ್ಟು ಪದಕಗಳ ಸಂಖ್ಯೆ ಈಗ 54ಕ್ಕೆ ಏರಿದೆ. ಇದರಲ್ಲಿ 21 ಬೆಳ್ಳಿ, 26 ಕಂಚಿನ ಪದಕಗಳು ಸೇರಿವೆ. ಇದನ್ನೂ ಓದಿ: ಜಿಮ್ ಪ್ರಿಯರ ಮನಗೆದ್ದ ಹೈರಾಕ್ಸ್- ಏನಿದು ಗೇಮ್ಸ್? ಯಾಕೆ ಇಷ್ಟೊಂದು ಜನಪ್ರಿಯ?

