ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹಿಂದಿ ನಾಮಫಲಕಕ್ಕೆ ಟೇಪ್ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳಿಂದ ನಮ್ಮ ಮೆಟ್ರೋ ನಿಲ್ದಾಣದ ಫಲಕಗಳಲ್ಲಿ ಹಿಂದಿ ಬೇಡ ಅನ್ನೊ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಚಿಕ್ಕಪೇಟೆ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಹಿಂದಿ ನಾಮಫಲಕಕ್ಕೆ ಟೇಪ್ ಹಾಕಲಾಗಿದೆ.
ಇದನ್ನೂ ಓದಿ: #NammaMetroHindiBeda ಬೆಂಗಳೂರಿನಲ್ಲಿ ನಂ.1 ಟ್ರೆಂಡಿಂಗ್ ಟಾಪಿಕ್
ಆದ್ರೆ ಈ ಬಗ್ಗೆ ಬಿಎಮ್ಆರ್ಸಿಎಲ್ ಅಧಿಕಾರಿಗಳು ಮಾತ್ರ ನಾವು ಹಿಂದಿ ನಾಮಫಲಕಕ್ಕೆ ಟೇಪ್ ಹಾಕಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ರಾತ್ರಿ ಓಡಾಡುತ್ತಿದ್ದು. ಅವರೇ ಈ ರೀತಿ ಮಾಡಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.