ಬೆಂಗಳೂರು: ನಕಲಿ ಔಷಧಿ ದಂಧೆ (Fake Medicine Racket) ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ ಪ್ರಶಾಂತ್ ಬಳಿಕ ಇದೀಗ ಮತ್ತೊಬ್ಬ ಆರೋಪಿಯನ್ನು ಎಸ್ಐಟಿ (SIT) ಬಂಧಿಸಿದೆ.
ಬಾಲಸುಬ್ರಮಣಿಯನ್ ಬಂಧಿತ ಆರೋಪಿ. ಬಾಲಸುಬ್ರಮಣಿಯನ್ ಪ್ರಶಾಂತ್ನ ಡಮ್ಮಿ ಕಂಪನಿಗೆ ಮಾಲೀಕನಾಗಿದ್ದ. ಎಸ್ಐಟಿ ತನಿಖಾದಿಕಾರಿ ಅಂಜನ್ ಕುಮಾರ್ ಚೆನ್ನೈನಲ್ಲಿ ಬಾಲಸುಬ್ರಮಣಿಯನ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೃಷ್ಣಾ, ಮಲಪ್ರಭಾ, ಘಟಪ್ರಭಾ ಉಕ್ಕಿ ಹರಿದರೂ ಬಾಗಲಕೋಟೆಯ ಕೆರೆ-ಕಾಲುವೆಗಳು ಮಾತ್ರ ಬಣಬಣ!
ನಕಲಿ ಔಷಧ ತಯಾರಿಕೆ ಮತ್ತು ಮಾರಾಟ ಜಾಲ ಪ್ರಕರಣದ ಕಿಂಗ್ಪಿನ್ ಪ್ರಶಾಂತ್ನನ್ನ ಎಸ್ಐಟಿ ಸೋಮವಾರ ಬಂಧಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಶಾಂತ್ನನ್ನ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: 4*400 ರಿಲೇಯಲ್ಲಿ ಮಹಿಳೆಯರಿಗೆ ಚಿನ್ನ, ಪುರುಷರಿಗೆ ಕಂಚು
ಪ್ರಶಾಂತ್ ವಿರುದ್ಧ ಈಗಾಗಲೇ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಆತ ಅಜರ್ಬೈಜಾನ್ನಲ್ಲಿ ತಲೆಮರೆಸಿಕೊಂಡಿದ್ದ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿದ್ದವು. ವಿದೇಶದಿಂದ ವಾಪಸ್ ಬಂದ ಸಂದರ್ಭದಲ್ಲಿ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಎಸ್ಐಟಿ ಅಧಿಕಾರಿಗಳು ಆತನನ್ನ ಬಂಧಿಸಿದ್ದಾರೆ. ನಕಲಿ ಔಷಧಿ ಪ್ರಕರಣದಲ್ಲಿ ಆರೋಪಿ ವೀರೇಶ್ ಜೈನ್ ನೀಡಿರುವ ಹೇಳಿಕೆಯ ಆಧಾರದ ಮೇಲೆ ಪ್ರಶಾಂತ್ನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ನೋಟು ರದ್ದತಿಯಿಂದ ಆರ್ಥಿಕತೆ ನಾಶ, ಮತ ರದ್ದತಿಯಿಂದ ಪ್ರಜಾಪ್ರಭುತ್ವ ನಾಶ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

