ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಮಲ್ಲೇಶ್ವರಂನ (Malleshwaram) ಸ್ಮಾರ್ಟ್ ಬಜಾರ್ ಮುಂದೆ ಬೃಹತ್ ಮರ (Tree) ಧರೆಗುರುಳಿದ್ದು, ಮೂರು ವಾಹನಗಳು ಜಖಂ ಆಗಿವೆ.
ಒಂದು ಕಾರು (Car) ಸಂಪೂರ್ಣ ಜಖಂ ಆಗಿದೆ. ಗ್ಯಾಸ್ ಆಟೋ ಮತ್ತು ದ್ವಿಚಕ್ರ ವಾಹನದ ಮೇಲೂ ಮರದ ಕೊಂಬೆಗಳು ಬಿದ್ದು, ಹಾನಿಯಾಗಿದೆ. ರಸ್ತೆಗೆ ಸಂಪೂರ್ಣ ಮರ ಅಡ್ಡವಾಗಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಜಿಬಿಎ ಸಿಬ್ಬಂದಿ ಬೇಗ ಮರ ತೆರವುಗೊಳಿಸಬೇಕು ಎಂದು ಸ್ಥಳೀಯರು, ವಾಹನ ಚಾಲಕರು ಆಗ್ರಹಿಸಿದ್ದಾರೆ.

ಜಖಂಗೊಂಡ ಕಾರಿನ ಮಾಲೀಕ ವಿನೋದ್ ಕುಮಾರ್ ಮಾತನಾಡಿ, ನಾನು ರಾತ್ರಿ ಕಾರಿನಲ್ಲೇ ಮಲಗೋದು. ನಿನ್ನೆ (ಸೆ.28) ಒಂದು ಸಾವಾಗಿತ್ತು, ಅದಕ್ಕೆ ಕಾರು ನಿಲ್ಲಿಸಿ ಹೋಗಿದ್ದೆ. ಕಾರಿನಲ್ಲಿ ಮಲಗಿದ್ದರೆ ನನ್ನ ಕತೆ ಅಷ್ಟೇ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ರಾತ್ರಿಯಿಂದ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ – ವಾಹನ ಸವಾರರ ಪರದಾಟ
ಇಲ್ಲಿ ರಸ್ತೆ ಅಗೆದಿದ್ದರು, ಮರದ ಬುಡ ಸಡಿಲ ಆಗಿತ್ತು. ಇದೇ ಕಾರಣಕ್ಕೆ ಮರ ಬಿದ್ದಿದೆ ಎಂದು, ಜಿಬಿಎ ವಿರುದ್ಧ ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜ್ಯದ 19 ಜಿಲ್ಲೆಗಳಿಗೆ ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ

