ಹುಬ್ಬಳ್ಳಿ: 2013ರಲ್ಲಿ ರೈಲು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekhar) ಅವರನ್ನು ಹುಬ್ಬಳ್ಳಿ ರೈಲ್ವೇ ಪೊಲೀಸರು ( Hubballi Railway Police) ಬಂಧಿಸಿದ್ದಾರೆ.
ಶಿರಸಿಯ (Sirsi) ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಅವರು ಆಗಮಿಸಿದ್ದರು. ಈ ವೇಳೆ ಶಿರಸಿ ಪೊಲೀಸರ ಸಹಾಯ ಪಡೆದು ಅವರನ್ನು ಬಂಧಿಸಲಾಗಿದೆ. 2013ರಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಹೋರಾಟದ (Mahadayi Protest) ವೇಳೆ ಅವರ ನೇತೃತ್ವದಲ್ಲಿ ರೈಲು ತಡೆಯಲಾಗಿತ್ತು. ಸುಮಾರು ಆರು ಗಂಟೆಗಳ ಕಾಲ ಎಲ್ಲಾ ರೈಲುಗಳನ್ನು ತಡೆದು ರೈತರು ಹೋರಾಟ ಮಾಡಿದ್ದರು. ಇದನ್ನೂ ಓದಿ: ನಕಲಿ ಔಷಧಿ ಜಾಲದ ಕಿಂಗ್ಪಿನ್ ಪ್ರಶಾಂತ್ ಅರೆಸ್ಟ್!
ಈ ಬಗ್ಗೆ ಚಂದ್ರಶೇಖರ್ ಅವರ ಮೇಲೆ ರೈಲ್ವೇ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಹೊರಡಿಸಿದ್ದ ವಾರೆಂಟ್ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಇಂದು (ಸೆ.28) ಹುಬ್ಬಳ್ಳಿ ಜೆಎಂಎಫ್ಸಿ ಕೋರ್ಟ್ಗೆ ಅವರನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: 40 ಕಿಮೀ ಚೇಸ್ – ಗುಟ್ಕಾ ಸ್ಮಗ್ಲಿಂಗ್ ಗ್ಯಾಂಗ್ನ್ನ ಸೆರೆ ಹಿಡಿದ ತಮಿಳುನಾಡು ಪೊಲೀಸರು

