ಗಾಂಧಿನಗರ: ದೇಶದ ಮೊದಲ ಎಲ್ಎನ್ಜಿ-ಡೀಸೆಲ್ ಡ್ಯುಯಲ್-ಇಂಧನ ರೈಲಿಗೆ ಸಬರಮತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಿದ್ದಾರೆ. ಈ ರೈಲು ಗುಜರಾತ್ನ ಸಬರಮತಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಸಬರಮತಿ ಇಂಟಿಗ್ರೇಟೆಡ್ ಕೋಚಿಂಗ್ ಡಿಪೋದಲ್ಲಿರುವ ಎರಡು 1,400 ಹೆಚ್ಪಿ ಇಂಜಿನ್ಗಳನ್ನು ಎಲ್ಎನ್ಜಿ-ಡೀಸೆಲ್ ಡ್ಯುಯಲ್-ಇಂಧನ ವ್ಯವಸ್ಥೆಗೆ ಪರಿವರ್ತಿಸಲಾಗಿದೆ. ಎಂಟು ಬೋಗಿಗಳನ್ನು ಈ ರೈಲಿಗೆ ಅಳವಡಿಸಲಾಗಿದೆ. ಈ ತಂತ್ರಜ್ಞಾನದಿಂದಾಗಿ ಡೀಸೆಲ್ ಬಳಕೆಯಲ್ಲಿ ಸುಮಾರು 40% ರಷ್ಟು ಕಡಿತವಾಗಲಿದೆ. ಇಂಧನ ವೆಚ್ಚ ಮತ್ತು ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಇದನ್ನೂ ಓದಿ: ಹಬ್ಬದ ಪ್ರಯಾಣಿಕರಿಗೆ ರೈಲ್ವೆ ಸಿಹಿಸುದ್ದಿ; ಮುಂಬೈ–ಬೆಂಗಳೂರು ನಡುವೆ ವಿಶೇಷ ರೈಲು
ಈ ರೈಲಿನಲ್ಲಿ 2,200 ಲೀಟರ್ ಸಾಮರ್ಥ್ಯದ LNG (Liquefied Natural Gas) ಟ್ಯಾಂಕ್ ಅಳವಡಿಸಲಾಗಿದೆ. ಇದರಲ್ಲಿ ಸುಮಾರು 850-900 ಕೆಜಿ LNG ತುಂಬಬಹುದಾಗಿದೆ. ಫುಲ್ ಟ್ಯಾಂಕ್ಗೆ ಸುಮಾರು 1,600 ಕಿಮೀ ಸಂಚಾರ ಮಾಡಬಹುದಾಗಿದೆ. ಈ ಬಗೆಯ ಪ್ರತಿ ಎಂಜಿನ್ನಿಂದ ವಾರ್ಷಿಕ ಸುಮಾರು 11.9 ಲಕ್ಷ ರೂ. ಉಳಿತಾಯವಾಗಲಿದ್ದು, ಎರಡು ಎಂಜಿನ್ಗಳಿಂದ ಒಟ್ಟು 23.9 ಲಕ್ಷಕ್ಕೂ ಹೆಚ್ಚು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ದ್ವಿ-ಇಂಧನ ವ್ಯವಸ್ಥೆಯು ಅಗತ್ಯಕ್ಕೆ ತಕ್ಕಂತೆ ಎಲ್ಎನ್ಜಿ ಮತ್ತು ಡೀಸೆಲ್ ನಡುವೆ ಬದಲಾಗುವ ಸೌಲಭ್ಯ ಹೊಂದಿದೆ. ಯಾವುದೇ ಸ್ಥಳದಲ್ಲಿ ಎಲ್ಎನ್ಜಿ ಲಭ್ಯವಿಲ್ಲದಿದ್ದರೂ ರೈಲು ಸಂಪೂರ್ಣವಾಗಿ ಡೀಸೆಲ್ನಲ್ಲೇ ಚಲಿಸಬಲ್ಲದು. ಈಗಾಗಲೇ ಸುಮಾರು 2,000 ಕಿಮೀ ಯಶಸ್ವಿ ಪ್ರಾಯೋಗಿಕ ಸಂಚಾರ ಮಾಡಲಾಗಿದೆ. ಇದನ್ನೂ ಓದಿ: ಟಿಕೆಟ್ ಸಿಕ್ಕಿಲ್ಲ ಅಂತ ರೈಲು ಅಪಘಾತದ ಪರಿಹಾರ ನಿರಾಕರಿಸುವಂತಿಲ್ಲ; ಸುಪ್ರೀಂ ಕೋರ್ಟ್

