ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮಾಫಿ ಸಾಕ್ಷಿಯಾಗಲು (ಪ್ರಾಸಿಕ್ಯೂಷನ್ ವಿಟ್ನೆಸ್) ಒಪ್ಪಿದ್ದ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಾಳೆ ಕೋರ್ಟ್‌ನಲ್ಲಿ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ಮುಂದೆ 16 ಆರೋಪಿಗಳು ಮಾತ್ರ ಇರಲಿದ್ದು, ಕೊಲೆ ಪ್ರಕರಣದಲ್ಲಿ ಪ್ರದೋಷ್‌ನನ್ನು ಪ್ರಾಸಿಕ್ಯೂಷನ್ ವಿಟ್ನೆಸ್ ಆಗಿ ಕೋರ್ಟ್ ಪರಿಗಣಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಳೆ ಮಹತ್ವದ ಕಾನೂನು ಪ್ರಕ್ರಿಯೆ ನಡೆಯಲಿದೆ. ಪ್ರಕರಣದ ಪ್ರಮುಖ ಮಾಫಿ ಸಾಕ್ಷಿ (ಅಪ್ರೂವರ್) ಪ್ರದೂಷ್‌ನ ಮುಖ್ಯ ವಿಚಾರಣೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ನಡೆಸಲಿದ್ದಾರೆ.
ಈಗಾಗಲೇ ಲಿಖಿತ ರೂಪದಲ್ಲಿ ಸಂಪೂರ್ಣ ಮಾಹಿತಿ ನೀಡಿರುವ ಪ್ರದೂಷ್, ಕೋರ್ಟ್‌ನಲ್ಲಿ ಘಟನೆಯ ಸಂಪೂರ್ಣ ಸತ್ಯಾಸತ್ಯತೆಯನ್ನು ಬಿಚ್ಚಿಡಲಿದ್ದಾನೆ. ಪ್ರಾಸಿಕ್ಯೂಷನ್‌ನ ಚೀಫ್ ಎಕ್ಸಾಮಿನೇಷನ್ ಮುಗಿದ ತಕ್ಷಣ, ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 16 ಆರೋಪಿಗಳ ಪರ ವಕೀಲರು ಪ್ರದೂಷ್‌ನನ್ನು ಕ್ರಾಸ್ ಎಕ್ಸಾಮಿನೇಷನ್‌ಗೆ ಒಳಪಡಿಸಲಿದ್ದಾರೆ.
ಕ್ರಾಸ್ ಎಕ್ಸಾಮಿನೇಷನ್ ಉದ್ದೇಶ
ಅಪ್ರೂವರ್ ತನಗೆ ಶಿಕ್ಷೆಯಿಂದ ವಿನಾಯಿತಿ ಸಿಗಲಿ ಎಂಬ ಕಾರಣಕ್ಕಾಗಿ ಸುಳ್ಳು ಸಾಕ್ಷಿ ಹೇಳುತ್ತಿರಬಹುದು ಎಂಬ ಸಂಶಯವಿರುತ್ತದೆ. ಆದ್ದರಿಂದ ಆರೋಪಿಗಳ ಪರ ವಕೀಲರು ಕ್ರಾಸ್ ಎಕ್ಸಾಮಿನೇಷನ್ ಮೂಲಕ ಆತ ಹೇಳುತ್ತಿರುವುದು ಸುಳ್ಳೋ ಅಥವಾ ಸತ್ಯವೋ ಎಂಬುದನ್ನು ವಕೀಲರು ಪತ್ತೆಹಚ್ಚುತ್ತಾರೆ. ಇದನ್ನೂ ಓದಿ: ಆಫ್ರಿಕಾದ ಬಾರ್‌ನಲ್ಲಿ ಭೀಕರ ಗುಂಡಿನ ದಾಳಿ – 17 ಮಂದಿ ಬಲಿ, 15 ಮಂದಿಗೆ ಗಾಯ
16 ಮಂದಿ ವಕೀಲರ ಕಠಿಣ ಪ್ರಶ್ನೆಗಳನ್ನು ಎದುರಿಸುವುದು ಪ್ರದೂಷ್ ಮುಂದಿರುವ ಭಾರಿ ಸವಾಲಾಗಿದೆ. ಕೊಲೆಯಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರವೇನು ಎಂಬುದನ್ನು ಪ್ರದೂಷ್ ಸಾಕ್ಷಿ ನುಡಿಯಲಿದ್ದು, ಇದು ಪ್ರಕರಣಕ್ಕೆ ಬಲವಾದ ತಿರುವು ನೀಡುವ ಸಾಧ್ಯತೆಯಿದೆ. ಈ ಸಾಕ್ಷಿ ವಿಚಾರಣೆ ದರ್ಶನ್ ಹಾಗೂ ಪವಿತ್ರಾ ಗೌಡಗೆ ಕಾನೂನುಬದ್ಧವಾಗಿ ದೊಡ್ಡ ಆತಂಕ ತಂದೊಡ್ಡಿದೆ.
ದರ್ಶನ್ ಅರ್ಜಿ ವಜಾ
ಸುಪ್ರೀಂ ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಸಮಯ ಕೇಳಿ ಮಾಫಿ ಸಾಕ್ಷಿ ಹೇಳಿಕೆ ಮುಂದೂಡುವಂತೆ ದರ್ಶನ್ ಕೋರಿದ್ದ ಅರ್ಜಿ ವಜಾಗೊಂಡಿದೆ. ಇದೀಗ ನಾಳೆ ಪ್ರದೋಷ್ ತನ್ನ ಹೇಳಿಕೆ ದಾಖಲು ಮಾಡಲಿದ್ದು, ಆರೋಪಿಗಳಿಗೆ ಬಹುದೊಡ್ಡ ಸಂಕಷ್ಡ ತಂದೊಡ್ಡುವ ಸಾಧ್ಯತೆಯಿದೆ. ಇದನ್ನೂ ಓದಿ: ಮಂಗಳೂರು | ಗೋಡೆ ಕುಸಿದು ವಿದ್ಯಾರ್ಥಿ ಸಾವು -ಕಟ್ಟಡ ಮಾಲೀಕ, ಆಯೋಜಕರ ವಿರುದ್ಧ FIR

