ಹುಬ್ಬಳ್ಳಿ: ಪೂಜಾ, ದೀಪಾವಳಿ ಹಾಗೂ ಛತ್ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ಮಧ್ಯ ರೈಲ್ವೆ ಮುಂಬೈ–ಬೆಂಗಳೂರು ನಡುವೆ ಸಾಪ್ತಾಹಿಕ ವಿಶೇಷ ರೈಲು ಸೇವೆ ಆರಂಭಿಸಲಿದೆ.
ರೈಲು ಸಂಖ್ಯೆ 01013 ಸಿಎಸ್ಎಂಟಿ ಮುಂಬೈ–ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 10ರಿಂದ ನವೆಂಬರ್ 21ರವರೆಗೆ ಪ್ರತಿ ಶನಿವಾರ ಮುಂಬೈನ ಸಿಎಸ್ಎಂಟಿಯಿಂದ ರಾತ್ರಿ 12:35ಕ್ಕೆ ಹೊರಟು, ಅದೇ ದಿನ ರಾತ್ರಿ 11:55ಕ್ಕೆ ಎಸ್ಎಂವಿಟಿ ಬೆಂಗಳೂರಿಗೆ ತಲುಪಲಿದೆ.
ಮರುಪ್ರಯಾಣದಲ್ಲಿ ರೈಲು ಸಂಖ್ಯೆ 01014 ಎಸ್ಎಂವಿಟಿ ಬೆಂಗಳೂರು–ಸಿಎಸ್ಎಂಟಿ ಮುಂಬೈ ವಿಶೇಷ ರೈಲು ಅಕ್ಟೋಬರ್ 11ರಿಂದ ನವೆಂಬರ್ 22ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 4:30ಕ್ಕೆ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 4:05ಕ್ಕೆ ಮುಂಬೈ ತಲುಪಲಿದೆ.
ಹುಬ್ಬಳ್ಳಿ, ಧಾರವಾಡ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ದಾದರ್, ಥಾಣೆ, ಕಲ್ಯಾಣ್, ಪುಣೆ, ಸತಾರಾ, ಸಾಂಗ್ಲಿ, ಮಿರಜ್, ಬೆಳಗಾವಿ, ಲೊಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ ಹಾಗೂ ತುಮಕೂರು ಸೇರಿದಂತೆ ಎರಡೂ ಮಾರ್ಗಗಳಲ್ಲಿ ವಿವಿಧ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ.
ಈ ವಿಶೇಷ ರೈಲುಗಳು ಪ್ರತಿ ದಿಕ್ಕಿನಲ್ಲಿ 7 ಟ್ರಿಪ್‌ಗಳಂತೆ ಒಟ್ಟು 7 ಸುತ್ತು ಸಂಚರಿಸಲಿವೆ. ರೈಲಿನಲ್ಲಿ 2 ಎಸಿ 2-ಟೈರ್, 18 ಎಸಿ 3-ಟೈರ್ ಹಾಗೂ 2 ಲಗೇಜ್-ಕಮ್-ಗಾರ್ಡ್-ಕಮ್-ಜನರೇಟರ್ ವ್ಯಾನ್‌ಗಳು ಸೇರಿದಂತೆ ಒಟ್ಟು 22 ಬೋಗಿಗಳಿರಲಿವೆ.

