ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಅಭಿನಯದ ಬಹುನಿರೀಕ್ಷಿತ ‘ಲವ್ ಆ್ಯಂಡ್ ವಾರ್’ (Love And War) ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ಆಲಿಯಾ ಕ್ಯಾಬರೆ ಕಲಾವಿದೆಯಂತೆ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಪೋಸ್ಟರ್ನಲ್ಲಿ ಆಲಿಯಾ ತಮ್ಮ ಸಿಕ್ಸ್ ಪ್ಯಾಕ್ ಆಬ್ಸ್ ಮೂಲಕ ಗಮನ ಸೆಳೆದಿದ್ದಾರೆ. ಭನ್ಸಾಲಿ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಭಟ್ ಅವರ ಪೋಸ್ಟರ್ ಹಂಚಿಕೊಂಡಿದೆ. ಇದಕ್ಕೂ ಒಂದು ದಿನ ಮೊದಲು ರಣಬೀರ್ ಕಪೂರ್ (Ranbir Kapoor) ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು.
SANJAY LEELA BHANSALI – ALIA BHATT REUNITE – ALIA’S FIRST LOOK IN ‘LOVE AND WAR’ – 21 JAN 2027 RELEASE… The last time #SanjayLeelaBhansali and #AliaBhatt came together, they delivered a National Award-winning film and a smash-hit led by a female protagonist.
Now, the… pic.twitter.com/Ori5zVU5kS
— taran adarsh (@taran_adarsh) September 25, 2026
ಆಲಿಯಾ ಭಟ್ ಕೂಡ ಚಿತ್ರದ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಆಗ್ ಭೀ, ದಿಲೋಂ ಕಿ ಜಾನ್ ಭೀ!” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ರಣಬೀರ್ ಕಪೂರ್, ವಿಕ್ಕಿ ಕೌಶಲ್ ಸೇರಿದಂತೆ ಚಿತ್ರದ ತಂಡವನ್ನ ಟ್ಯಾಗ್ ಮಾಡಿದ್ದಾರೆ.
ಚಿತ್ರದ ನಿರ್ಮಾಣ ಸಂಸ್ಥೆ ಆಲಿಯಾ ಅವರ ಮತ್ತೊಂದು ಲುಕ್ ಪೋಸ್ಟರ್ ಅನ್ನೂ ಬಿಡುಗಡೆ ಮಾಡಿದೆ. ಇದರಲ್ಲಿ ನಟಿಯ ವಿಭಿನ್ನ ಹಾಗೂ ಗ್ಲಾಮರಸ್ ಅವತಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

‘ರೀ-ಯುನೈಟೆಡ್’ ಎಂದ ಆಲಿಯಾ
ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟರ್ ಹಂಚಿಕೊಳ್ಳುವ ವೇಳೆ ʻReunitedʼ ಎಂದು ಬರೆದು ಕೆಂಪು ಗುಲಾಬಿಯ ಎಮೋಜಿ ಹಾಕಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ಮತ್ತು ಆಲಿಯಾ ಭಟ್ ಅವರ ಕಾಂಬಿನೇಷನ್ಗೆ ಕೆಂಪು ಗುಲಾಬಿಯೊಂದಿಗಿನ ವಿಶೇಷ ನಂಟಿದೆ. ಇವರಿಬ್ಬರ ಹಿಂದಿನ ಸಿನಿಮಾ ‘ಗಂಗೂಬಾಯಿ ಕಾಠಿಯಾವಾಡಿ’ಯಲ್ಲೂ ಹಲವು ದೃಶ್ಯಗಳಲ್ಲಿ ಗುಲಾಬಿಗೆ ಮಹತ್ವ ನೀಡಲಾಗಿತ್ತು.

ಆಲಿಯಾ ಲುಕ್ಗೆ ನೀತು, ಕರೀನಾ ಮೆಚ್ಚುಗೆ
ಆಲಿಯಾ ಭಟ್ ಅವರ ಹೊಸ ಲುಕ್ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಅವರ ಅತ್ತೆ ಹಾಗೂ ಹಿರಿಯ ನಟಿ ನೀತು ಕಪೂರ್ ಕೂಡ ಪ್ರತಿಕ್ರಿಯಿಸಿದ್ದು, ʻUffff’ ಎಂದು ಬರೆದುಕೊಂಡಿದ್ದಾರೆ. ಇನ್ನು ಕರೀನಾ ಕಪೂರ್ ಖಾನ್ ಕೂಡ ಆಲಿಯಾ ಅವರ ಪೋಸ್ಟರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರತಿಕ್ರಿಯೆಯಲ್ಲಿ ʻKilling it, Alooooʼ (ಅಯ್ಯೋ ಕೊಲ್ಲುತ್ತಿದೆ) ಎಂದು ಬರೆದಿದ್ದಾರೆ.

