ಮಡಿಕೇರಿ: ಹಲವು ದಿನಗಳ ಬಳಿಕ ಕೊಡಗಿನಲ್ಲಿ (Kodagu) ಭಾರೀ (Rain) ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ರಸ್ತೆ ಮೇಲೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಮಡಿಕೇರಿ (Madikeri) ತಾಲೂಕಿನ ಹಲವೆಡೆ ಇಂದು (ಸೆ.24) ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಸಂಜೆಯಾಗುತ್ತಿದ್ದಂತೆ ಹಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮಡಿಕೇರಿ, ಸುಂಟಿಕೊಪ್ಪ, ಗಾಳಿಬೀಡು ಸೇರಿದಂತೆ ಇತರೆ ಭಾಗಗಳಲ್ಲಿ ಮಳೆಯಾಗುತ್ತಿದೆ. ಇದನ್ನೂ ಓದಿ: ಮದಗಜಗಳ ಕಾದಾಟದಲ್ಲಿ ಗಂಡಾನೆ ಬಲಿ – ಕಳ್ಳರಕೋಬೆ ಹಳ್ಳದಲ್ಲಿ ಕಳೇಬರ ಪತ್ತೆ
ದಿಢೀರ್ ಮಳೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹಲವು ದಿನಗಳ ಬಳಿಕ ಮಳೆಯಾಗುತ್ತಿದ್ದು, ಬಿಸಿಲಿನಿಂದ ಕಂಗೆಟ್ಟ ಜನ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಆಂಧ್ರ ಆಕ್ಷೇಪ – ಅರ್ಜಿ ವಿಚಾರಣೆ 8 ವಾರಗಳಿಗೆ ಮುಂದೂಡಿದ ಸುಪ್ರೀಂ
