ಬಾಲಿವುಡ್ ಸಿನಿಮಾ ತಾರೆಯರನ್ನು ಆಕರ್ಷಿಸುವ ಮುಂಬೈನ ಲಾಲ್‌ಬಾಗ್‌ಚಾ ರಾಜಾ ಗಣಪತಿ ದರ್ಶನಕ್ಕೆ ಹಲವರು ಬರುತ್ತಾರೆ. ಈ ಬಾರಿ ಗೋವಿಂದ (Govinda) ಆಗಮನ ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದೆ.
ಏಕೆಂದರೆ, ಬಾಲಿವುಡ್ ಹಿರಿಯ ನಟ ಗೋವಿಂದ ಸದಾ ಪತ್ನಿಯೊಂದಿಗೆ ಬಂದು ದರ್ಶನ ಪಡೆಯುತ್ತಿದ್ದ ಜಾಗದಲ್ಲಿ ಇದೀಗ ವದಂತಿ ಗೆಳತಿ ಕೋಮಲ್ (Komal Rani Swarnkar) ಜೊತೆ ಜೋಡಿಯಾಗಿ ಬಂದು ಗಣಪತಿ ದರ್ಶನ ಪಡೆದಿದ್ದಾರೆ. ಗೋವಿಂದ ಇಲ್ಲಿ ಏನನ್ನು ಪ್ರಸ್ತುತ ಪಡಿಸಲು ಹೊರಟಿದ್ದಾರೆ ಅನ್ನೋದು ಬಹಳ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಶಾಕ್ ಕೊಟ್ಟ ಎಮರ್ಜೆನ್ಸಿ ಎಕ್ಸಿಟ್… ದೊಡ್ಮನೆ ಸ್ಪರ್ಧಿಗಳು ಹೈರಾಣು!
37 ವರ್ಷದ ಗೋವಿಂದ ಹಾಗೂ ಸುನೀತಾ ಅಹೂಜಾ ದಾಂಪತ್ಯದ ಬಿರುಕು ಇದೀಗ ರಹಸ್ಯವಾಗಿ ಉಳಿದಿರುವ ವಿಚಾರ ಅಲ್ಲ. ಇಬ್ಬರ ಮನಸ್ತಾಪಕ್ಕೆ ಗೋವಿಂದ ಕೋಸ್ಟಾರ್ ನಟಿ ಕೋಮಲ್ ರಾಣಿ ಕಾರಣ ಎಂಬ ಅನುಮಾನಗಳಿದ್ದವು. ಅದಕ್ಕೆ ಪುಷ್ಠಿ ನೀಡುವಂತೆ ಗೋವಿಂದ ಪದೇ ಪದೇ ಕೋಮಲ್ ಜೊತೆ ಕಾಣಿಸಿಕೊಳ್ತಿದ್ದಾರೆ.
ಗೋವಿಂದ ಹಾಗೂ ಕೋಮಲ್ ಒಟ್ಟಿಗೆ ಗಣೇಶ ದರ್ಶನ ಪಡೆದ ಸುದ್ದಿ ವೈರಲ್ ಆಗುತ್ತಿದ್ದಂತೆ ಗೋವಿಂದ ಪತ್ನಿ ಸುನೀತಾ (Sunita Ahuja) ಏರ್‌ಪೋರ್ಟ್‌ನಲ್ಲಿ ಪಾಪರಾಜಿಗಳ ಕ್ಯಾಮೆರಾ ಎದುರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಾಕುನಾಯಿಯನ್ನು ಮುದ್ದಾಡುತ್ತಾ ಕಾರ್ ಇಳಿದ ಸುನೀತಾ, ಮನುಷ್ಯರನ್ನ ಪ್ರೀತಿಸೋದಕ್ಕಿಂತ ಪ್ರಾಣಿಗಳನ್ನ ಪ್ರೀತಿಸೋದೇ ಉತ್ತಮ ಎಂದು ಹೇಳುತ್ತಾ ಮುನ್ನಡೆದಿದ್ದಾರೆ. ಹೀಗೆ ಪರೋಕ್ಷವಾಗಿ ಪತಿ ಗೋವಿಂದಗೆ ಟಾಂಗ್ ಕೊಟ್ಟಿದ್ದಾರೆ. ಹೀಗೆ ಹಿರಿಯ ನಟನ ಸಂಸಾರ ತಾಪತ್ರಯ ಬೀದಿಗೆ ಬಿದ್ದಿದೆ. ಇದನ್ನೂ ಓದಿ: ಬೆಟಾಲಿಯನ್ ಮುಹೂರ್ತ: ಟೀಮ್ ಸೇರಿಕೊಂಡ ಪ್ರಮೋದ್ ಶೆಟ್ಟಿ

