ನೆಲಮಂಗಲ: ಕ್ಷುಲ್ಲಕ ಕಾರಣಕ್ಕಾಗಿ ಜಗಳ ಬಿಡಿಸಲು ಬಂದಿದ್ದವನ ಮೇಲೆಯೇ ಚಾಕು ಇರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪೈಪ್ ಲೈನ್ ರೋಡ್ (Pipelibe Road) ಟಿ.ದಾಸರಹಳ್ಳಿಯಲ್ಲಿ (T Dasarahalli) ನಡೆದಿದೆ.
ಜೀವನ್ (29) ಮೃತ ವ್ಯಕ್ತಿ. ಮಹಮದ್ ಗೌಸ್ ಹಾಗೂ ವಸೀಂ ಆರೋಪಿಗಳು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶಾಕ್ ಕೊಟ್ಟ ಎಮರ್ಜೆನ್ಸಿ ಎಕ್ಸಿಟ್… ದೊಡ್ಮನೆ ಸ್ಪರ್ಧಿಗಳು ಹೈರಾಣು!
ನಾಲ್ಕು ದಿನದ ಹಿಂದೆ ಬಾರ್‌ನಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಜೀವನ್ ಗಲಾಟೆ ಬಿಡಿಸಿ ಕಳುಹಿಸಿದ್ದ. ಅದಾದ 10 ನಿಮಿಷದ ಬಳಿಕ ಅದೇ ಬಾರ್ ಮುಂದೆ ಜೀವನ್ ನಿಂತಿದ್ದ. ಈ ವೇಳೆ ಗೌಸ್ ಹಾಗೂ ವಾಸೀಂ ಬೈಕ್‌ನಲ್ಲಿ ಬಂದಿದ್ದು, ಏಕಾಏಕಿ ಕೊಲೆ ಮಾಡುವ ಉದ್ದೇಶದಿಂದಲೇ ಜೀವನ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ಚಾಕುವಿನಿಂದ ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜೀವ ಭಯದಲ್ಲೇ ಜೀವನ್ ಸ್ಥಳದಿಂದ ಓಡಿಹೋಗಿದ್ದು, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಬಳಿಕ ಹುಟ್ಟೂರು ಕೊಡಗಿಗೆ ಮೃತದೇಹ ರವಾನೆ ಮಾಡಲಿದ್ದಾರೆ.ಇದನ್ನೂ ಓದಿ: ಬೆಟಾಲಿಯನ್ ಮುಹೂರ್ತ: ಟೀಮ್ ಸೇರಿಕೊಂಡ ಪ್ರಮೋದ್ ಶೆಟ್ಟಿ

