ನವದೆಹಲಿ: ಸೆ.28ರಿಂದ 30ರವರೆಗೆ ಮೂರು ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ (Bank Protest) ಹಿನ್ನೆಲೆ ಗ್ರಾಹಕರ ಅನುಕೂಲಕ್ಕಾಗಿ ಸೆ.27ರ ಭಾನುವಾರ ಬ್ಯಾಂಕ್ ಕಾರ್ಯನಿರ್ವಹಿಸಲಿವೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆ.28 ರಿಂದ 30ರವರೆಗೆ ಕರೆ ನೀಡಿರುವ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮತ್ತು ಅದಕ್ಕೂ ಮುನ್ನ ಬರುವ ಸೆ.26 ಹಾಗೂ 27ರ ವಾರಾಂತ್ಯದ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಜನರ ಬ್ಯಾಂಕಿಂಗ್ ಅಗತ್ಯತೆಗಳನ್ನು ಪೂರೈಸಲು ಕೇಂದ್ರ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ನೀವು ಮಾಡಿರೋದು ದೇಶದ್ರೋಹ; ಟೈಂ ಬರುತ್ತೆ, ನಿಮ್ಮನ್ನ ಹಿಡಿಯುತ್ತೇವೆ – ರಾಹುಲ್ ಗಾಂಧಿ ಎಚ್ಚರಿಕೆ
ಸಾರ್ವಜನಿಕರ ಅಗತ್ಯ ಬ್ಯಾಂಕಿಂಗ್ ಸೇವೆಗಳಿಗೆ ದೀರ್ಘಕಾಲದವರೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಸೆಪ್ಟೆಂಬರ್ 27ರ ಭಾನುವಾರದಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಜೊತೆಗೆ ಎಲ್ಲಾ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ-ಸಂಯೋಜಿತ ಶಾಖೆಗಳು ಮತ್ತು ಕರೆನ್ಸಿ ಚೆಸ್ಟ್ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ.
ಬ್ಯಾಂಕ್ ಗ್ರಾಹಕರ ಹಿತ ಮತ್ತು ಅನುಕೂಲಕ್ಕೆ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತದೆ. ಅಲ್ಲದೇ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಮುಷ್ಕರವನ್ನು ಮುಂದೂಡುವಂತೆ ಸಂಘಟನೆಗಳಿಗೆ ಮನವಿ ಮಾಡಿದೆ.ಇದನ್ನೂ ಓದಿ: ಯುಜಿ ನೀಟ್ 3ನೇ ಸುತ್ತಿನ ಕೌನ್ಸೆಲಿಂಗ್ ಸೆ. 24ರಿಂದ ಆರಂಭ-ಕೆಇಎ

