ಬಿಗ್‌ಬಾಸ್ ಮನೆಯ ದೇವಿಯ ಪರಮ ಭಕ್ತನಾಗಿ ಪರಿಚಯಿಸಿಕೊಂಡವರು ಕಿರಣ್ ಶಾಸ್ತ್ರಿ. ತಮ್ಮೆಲ್ಲಾ ಕಷ್ಟಗಳನ್ನ ದೇವಿ ಬಳಿ ಹೇಳಿಕೊಂಡು ಬಲಕಡೆಯಿಂದ ಹೂ ಪಡೆದಿರೋದನ್ನ ಹಿಂದೆ ನೋಡಿದ್ದೇವೆ. ಇದೀಗ ಶಾಸ್ತ್ರಿ ಮೇಲೆ ದೇವಿ ಮುನಿಸಿಕೊಂಡಂತಿದೆ. ಪರಿ ಪರಿಯಾಗಿ ಶಾಸ್ತ್ರಿ ಬೇಡಿಕೊಂಡರೂ ಬಿಗ್‌ಬಾಸ್ ಮನೆಯ ದೇವಿ ಶಾಸ್ತ್ರಿಗೆ ಹೂವನ್ನ ಕೊಡಲೇ ಇಲ್ಲ.
ದೇವಿ ಪೂಜೆ ಮಾಡುವ ಕಿರಣ್ ಶಾಸ್ತ್ರಿ ನಾನು ಆಡಿದ ಆಟ ಚೆನ್ನಾಗಿತ್ತು ಅನ್ನೋದಕ್ಕೆ ಹೂವು ಕೊಡು, ಮುಂದೆ ನಾನು ರಕ್ಷಣೆ ಮಾಡುತ್ತೇನೆ ಅನ್ನೋದಕ್ಕೂ ಹೂವು ಕೊಡು ಎಂದು ಕೇಳುತ್ತಾರೆ. ಬಳಿಕ ಶಾಸ್ತ್ರಿ ಜೊತೆ ಧನುಷ್, ಜಗ್ಗ, ಲಿಖಿತ್ ಕೂಡ ಸೇರಿ ಫ್ಲೋರ್ ಮೇಲೆ ಕುಳಿತು ಪರಿ ಪರಿಯಾಗಿ ಪ್ರಾರ್ಥನೆ ಮಾಡಿದರೂ ದೇವಿ ಹೂವು ಕೊಡುವುದಿಲ್ಲ.

ಬಳಿಕ ದೇವಿ ಜೊತೆ ಶಾಸ್ತ್ರಿ ಮುದ್ದಾದ ಸಂಭಾಷಣೆ ಮಾಡುತ್ತಾರೆ. ಎಷ್ಟೇ ಬೇಡಿಕೊಂಡರೂ ದೇವಿ ಮಾತ್ರ ಹೂವು ಕೊಡುವುದೇ ಇಲ್ಲ. ಹಿಂದೆಲ್ಲಾ ಶಾಸ್ತ್ರಿಗೆ ದೇವಿ ಬಲಕಡೆಯಿಂದ ಹೂವು ಕೊಡುತ್ತಿದ್ದರು. ಆದರೆ ಈ ಬಾರಿ ದೊಡ್ಮನೆ ದೇವಿ ಕಿರಣ್ ಶಾಸ್ತ್ರಿಯನ್ನು ಭರ್ಜರಿಯಾಗಿ ಕಾಡಿಸಿದ್ದಾರೆ.

