– ಸಕ್ಕರೆ ದರ ಇಳಿದ್ರೂ, ಬೆಲ್ಲದ ದರ ಗಗನಕ್ಕೆ
ಬೆಂಗಳೂರು: ರಾಜ್ಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ದಿನನಿತ್ಯದ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ದಿನಕಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯನ ಜೇಬಿಗೆ ಭಾರ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿನ ಮಳೆ ಅಭಾವದಿಂದಾಗಿ ಬೆಳೆಗಳೆಲ್ಲ ನೆಲ ಕಚ್ಚಿ ಬರ ಆವರಿಸಿದೆ. ಇದರ ನೇರ ಪರಿಣಾಮವೇ ಇಂದಿನ ದರ ಏರಿಕೆಗೆ ಮೂಲ ಕಾರಣ. ರಾಜ್ಯದ ಬಹುತೇಕ ಕಡೆ ಫಸಲು ರೈತನ ಕೈ ಸೇರಿಲ್ಲ. ಕೆಲವೊಂದಷ್ಟು ಮಳೆ ಕೊರೆತೆಯಿಂದ ನಾಶವಾಗಿದ್ದರೆ, ಇನ್ನೂ ಕೆಲ ಕಡೆ ವ್ಯವಸಾಯವೇ ಆಗಿಲ್ಲ. ಇದೇ ಕಾರಣ ದಿನನಿತ್ಯ ಬಳಕೆಯ ತರಕಾರಿ ಬೆಲೆ ಮತ್ತೆ ಏರಿಕೆಯತ್ತ ಸಾಗುತ್ತಿದೆ.
ಈರುಳ್ಳಿ, ಟಮೆಟೋ ಬೀಟ್ರೂಟ್, ಸೌತೆಕಾಯಿ, ಕ್ಯಾರೆಟ್, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ದರ ಏರಿಕೆಯಾಗಿದೆ. ಇನ್ನೂ ವ್ಯಾಪಾರಿಗಳ ಪ್ರಕಾರ, ಪ್ರತಿ ವರ್ಷ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ತರಕಾರಿ ದರ ಇಳಿಕೆಯತ್ತ ಸಾಗುತ್ತಿತ್ತು. ಹೊಸ ತರಕಾರಿ ಮಾರುಕಟ್ಟೆಗೆ ಬರುತ್ತಿದ್ದ ಹಿನ್ನೆಲೆ, ತರಕಾರಿ ದರ ಕೂಡ ಕೈಗೆಟುಕುವಂತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಸೆಪ್ಟೆಂಬರ್ನಲ್ಲೇ ಏರಿಕೆಯತ್ತ ಸಾಗುತ್ತಿದೆ. ಸದ್ಯ ಕಳೆದ ಕೆಲವು ದಿನಗಳಿಂದ ರಾಜ್ಯದ ಕೆಲ ಕಡೆ ಸುರಿಯುತ್ತಿರೋ ಮಳೆ ಮುಂದಿನ ಕೆಲ ಒಂದಷ್ಟು ದಿನ ಮುಂದುವರೆದರೆ ಮಾತ್ರ ಮುಂದೆ ತರಕಾರಿ ದರ ಇಳಿಕೆ ಎನ್ನುತ್ತಿದ್ದಾರೆ ವ್ಯಾಪಾರಿಗಳು. ಇದನ್ನೂ ಓದಿ:
ಹಾಪ್ ಕಾಮ್ಸ್ ಗಳಲ್ಲಿ ತರಕಾರಿ ದರ
– ಈರುಳ್ಳಿ – 78.
– ಸೌತೆಕಾಯಿ – 48 ರಿಂದ 60.
– ನಾಟಿ ಕ್ಯಾರೆಟ್ – 68 ರಿಂದ 70.
– ಬೀಟ್ರೂಟ್ – 50.
– ಬೆಳ್ಳುಳ್ಳಿ – 300.
– ಟಮೆಟೋ – 30.
– ಆಲೂಗೆಡ್ಡೆ – 46 ರಿಂದ 50.
– ನುಗ್ಗೆಕಾಯಿ – 70
– ಮಂಗಳೂರು ಸೌತೆಕಾಯಿ – 64.
ಇನ್ನು ಇತ್ತ ಸಿಹಿ ಪ್ರಿಯರ ಪಾಲಿಗೆ ಸಕ್ಕರೆ ದರ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದ್ರೆ, ಇತ್ತ ಬೆಲ್ಲದ ದರ ಮಾತ್ರ ಇನ್ನೂ ಕಹಿಯಾಗಿಯೇ ಇದೆ. ಬೆಲ್ಲದ ದರ ಇನ್ನೂ ಏರಿಕೆಯ ಹಂತದಲ್ಲೇ ಇದ್ದು, ಖರೀದಿ ಮಾಡೋಕೆ ಜನ ಯೋಜನೆ ಮಾಡುವಂತಾಗಿದೆ. ಕೆ.ಜಿ ಬೆಲ್ಲದ ದರ ಸದ್ಯ 75 ರೂ. ದಾಟಿದೆ. ಕಬ್ಬಿನ ಇಳುವರಿ ಕಡಿಮೆ ಮತ್ತು ಮಾರುಕಟ್ಟೆಗೆ ಬರುವ ಬೆಲ್ಲದ ಪ್ರಮಾಣ ಕಡಿಮೆ ಇರುವ ಕಾರಣ ದರ ಏರಿಕೆಯಾಗುತ್ತಲೇ ಇದೆ. ಇದು ಇನ್ನು ಒಂದಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ. ಇದನ್ನೂ ಓದಿ:

