ಬಿಗ್ಬಾಸ್ (Bigg Boss) ಕನ್ನಡ ಸೀಸನ್ 13ರ ಎರಡನೇ ವಾರದ ಎಲಿಮಿನೇಶನ್ನಲ್ಲಿ ಭಾರೀ ಟ್ವಿಸ್ಟ್ ಇಡಲಾಗಿದೆ. ಮಹಾಕವಿ ಮಂಜು ಹಾಗೂ ಕಿರಣ್ ಶಾಸ್ತ್ರಿ ಇಬ್ಬರನ್ನೂ ಬಿಗ್ಬಾಸ್ ಮನೆಯಿಂದ ಹೊರಗೆ ಕಳಿಸಿದ್ದರು. ಆದರೆ ಇದೇ ಟ್ವಿಸ್ಟ್..! ಮನೆಯಿಂದ ತೆರಳಿದ್ದ ಕಂಟೆಸ್ಟಂಟ್ಗಳು ವಾಪಸ್ಸಾಗಿದ್ದಾರೆ.
ಶಾಸ್ತ್ರಿ ಹಾಗೂ ಮಂಜು ಇಬ್ಬರೂ ಸೀಕ್ರೆಟ್ ದ್ವಾರದಿಂದ ಮನೆಯೊಳಕ್ಕೆ ಬಂದಿದ್ದಾರೆ. ಮಂಜು ಹಾಗೂ ಶಾಸ್ತ್ರಿ ಮನೆಗೆ ವಾಪಸ್ ಬಂದರು ಎಂದಾಕ್ಷಣ ಇಬ್ಬರೂ ನಾಮಿನೇಶನ್ನಿಂದ ಪಾರಾಗಿದ್ದಾರೆ ಎಂದಲ್ಲ. ಕಂಟೆಸ್ಟಂಟ್ಗಳು ರಾತ್ರಿ ಮಲಗಿರುವಾಗಲೇ ಎಮರ್ಜೆನ್ಸಿ ಸೈರನ್ ಮನೆಯಲ್ಲಿ ಮೊಳಗಿದೆ. ಈ ಪ್ರಕಾರ ಮನೆಯಲ್ಲಿರೋ ಎಲ್ಲಾ ಕಂಟೆಸ್ಟಂಟ್ಗಳು ನೇರವಾಗಿ ನಾಮಿನೇಟ್ ಆಗಿದ್ದು ಮಿಡ್ವೀಕ್ನಲ್ಲಿ ಒಬ್ಬರು ಮನೆಯಿಂದ ಹೊರ ಹೋಗುವುದು ಫಿಕ್ಸ್ ಎಂದು ಸುದೀಪ್ (Kichcha Sudeep) ಘೋಷಣೆ ಮಾಡಿರುವ ವೀಡಿಯೋ ಬಿಗ್ಬಾಸ್ ಹೌಸ್ನಲ್ಲಿ ಪ್ರಸಾರ ಆಗಿದೆ.
ಮನೆಯಲ್ಲಿರೋ ಸ್ಪರ್ಧಿಗಳು ಒಂದು ಕಡೆ ಮಂಜು ಹಾಗೂ ಶಾಸ್ತ್ರಿ ವಾಪಸ್ ಬಂದಿರೋದ್ರಿಂದ ಶಾಕ್ಗೆ ಒಳಗಾದ್ರೆ ಇನ್ನೊಂದು ಕಡೆ ಎಲಿಮಿನೇಶನ್ ಭಯದಲ್ಲಿ ಇದ್ದಾರೆ. ಒಟ್ಟಿನಲ್ಲಿ ಮಿಡ್ವೀಕ್ನಲ್ಲಿ ಯಾರು ಮನೆಯಿಂದ ತೆರಳುತ್ತಾರೋ ಎಂದು ನೋಡುವ ಕುತೂಹಲ ಹೆಚ್ಚಾಗಿದೆ.

