ಬೆಂಗಳೂರು: ರಸ್ತೆಗಳಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿ, ಭೀತಿ ಹುಟ್ಟಿಸುತ್ತಿದ್ದ ಇಬ್ಬರು ಪುಡಿರೌಡಿಗಳನ್ನು ತಿಲಕ್ ನಗರ ಠಾಣೆ ಪೊಲೀಸರು (Tilak Nagar Police) ಯಶಸ್ವಿಯಾಗಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ನದೀಂ ಹಾಗೂ ಜುನೈದ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಜಯನಗರದ (Jayanagar) 9ನೇ ಬ್ಲಾಕ್ನ ನಡುರಸ್ತೆಯಲ್ಲಿ ಈ ಆರೋಪಿಗಳು ಲಾಂಗ್ ಹಿಡಿದು ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಓಡಾಡುತ್ತಿದ್ದರು. ಪುಂಡರ ಈ ಅಟ್ಟಹಾಸವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಆರೋಪಿಗಳು ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶಿಸುತ್ತಿದ್ದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನೂ ಓದಿ: ಅ.1 ರಿಂದ ಎಲ್ಪಿಜಿ ಬಳಕೆದಾರರಿಗೆ ಹೊಸ ರೂಲ್ಸ್; ಇನ್ಮುಂದೆ ಆಧಾರ್ ಇ-ಕೆವೈಸಿ ಇಲ್ಲದಿದ್ದರೆ ಸಿಗಲ್ಲ ಗ್ಯಾಸ್ ಸಿಲಿಂಡರ್
ಇದರಿಂದ ಎಚ್ಚೆತ್ತುಕೊಂಡ ತಿಲಕ್ ನಗರ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದು, ಆರೋಪಿಗಳ ಪತ್ತೆಗೆ ತಲಾಶ್ ನಡೆಸಿದ್ದರು. ಕೊನೆಗೂ ಇಬ್ಬರೂ ಪುಂಡರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಈ ತ್ವರಿತ ಕ್ರಮದಿಂದಾಗಿ ಸ್ಥಳೀಯ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ನಿರಾಳರಾಗಿದ್ದಾರೆ. ಇದನ್ನೂ ಓದಿ: ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಬ್ಲಾಸ್ಟ್ – ಇಬ್ಬರು ಸಾವು, ಮಹಿಳೆ ಗಂಭೀರ

