– ಎದೆ ಹಿಡಿದುಕೊಂಡು ವೇದಿಕೆಯಲ್ಲೇ ಮಲಗಿದ ಸಲ್ಲು – ನಟನಿಗೆ ಏನಾಯ್ತು?
ʻಬಿಗ್ ಬಾಸ್ -20 ವೀಕೆಂಡ್ ಕಾ ವಾರ್ʼನ (Bigg Boss 20 Weekend Ka Vaar) ಪ್ರೋಮೋ ದಲ್ಲಿ ಸಲ್ಮಾನ್ ಖಾನ್ ಎದೆ ಹಿಡಿದುಕೊಂಡು ಸ್ಟೇಜ್ ಮೇಲೆಯೇ ಮಲಗಿದಂತೆ ಕಾಣಿಸಿಕೊಂಡ ವಿಡಿಯೋ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಹೌದು. ಪ್ರೋಮೋದಲ್ಲಿ ಸಲ್ಮಾನ್ ಖಾನ್ (Salman Khan) ಎದೆ ಹಿಡಿದುಕೊಂಡು ತೀವ್ರ ನೋವಿನಿಂದ ಬಳಲುತ್ತಿರುವಂತೆ ಕಾಣಿಸಿಕೊಂಡಿದ್ದರು. ಇದರಿಂದ ಅಭಿಮಾನಿಗಳು ಹಾಗೂ ವೀಕ್ಷಕರು ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಕೆಲವರು, ಗಂಭೀರವಾದ ಆರೋಗ್ಯ ಸಮಸ್ಯೆಯನ್ನೇ ಮನರಂಜನೆಯ ಭಾಗವಾಗಿ ಬಳಸಿರುವುದಕ್ಕೆ ಟೀಕೆಯನ್ನೂ ವ್ಯಕ್ತಪಡಿಸಿದ್ದರು.
ವಿವಾದದ ಬೆನ್ನಲ್ಲೇ ನಟ ಕ್ಷಮೆ ಕೇಳಿದ್ದಾರೆ. ʻವೀಕೆಂಡ್ ಕಾ ವಾರ್ʼ ಪ್ರೋಮೋದಲ್ಲಿ ತಾನು ಹೃದಯಾಘಾತಕ್ಕೆ ಒಳಗಾದಂತೆ ಕಾಣಿಸಿಕೊಂಡಿದ್ದಕ್ಕೆ ನಟ ಸಲ್ಮಾನ್ ಖಾನ್ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ವೊಂದನ್ನ ಹಂಚಿಕೊಂಡಿದ್ದಾರೆ.
Salman Khan getting a heart attack LIVE on television 💀#BiggBoss20 #SalmanKhan pic.twitter.com/cyC8MVJQGM
— Sarthak🍷 (@Sarthk_corre) September 19, 2026
ತಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಪ್ರೋಮೋವನ್ನು ಎಡಿಟ್ ಮಾಡಿರುವ ರೀತಿಯಿಂದಾಗಿ ತಮ್ಮ ನಟನೆ ಮನೆಯೊಳಗೆ ʻಖಾಜಿ ತೌಕೀರ್ʼ ಮಾಡಿದ್ದ ನಟನೆಗೆ ಹೋಲುವಂತಾಗಿದೆ ಎಂದು ಹೇಳಿದ್ದಾರೆ.
ʻದೇವರ ದಯೆಯಿಂದ ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಿಗ್ಬಾಸ್ ಪ್ರೋಮೋವನ್ನ ಈ ರೀತಿಯಾಗಿ ಎಡಿಟ್ ಮಾಡಬಾರದಿತ್ತು. ಪ್ರೋಮೋ ನೋಡಿದಾಗ ನಾನು ಮನೆಯಲ್ಲಿ ಖಾಜಿ ಮಾಡಿದಂತೆಯೇ ಮಾಡುತ್ತಿದ್ದೇನೆ ಎಂಬ ಭಾವನೆ ಮೂಡುತ್ತದೆ. ಖಾಜಿ ಮಾಡಿದ್ದೇ ತಪ್ಪು ಎಂಬುದನ್ನ ತೋರಿಸಲು ಮಾತ್ರ ನಾನು ನೋವಿನಂತೆ ನಟಿಸಿದ್ದೆ. ಏಕೆಂದರೆ, ಅವರು ಆರೋಗ್ಯದ ಸಮಸ್ಯೆಯನ್ನು ಮನರಂಜನೆಗಾಗಿ ಬಳಸಿದ್ದರು. ಮನೆಯಲ್ಲಿದ್ದ 15 ಜನರಿಗೆ ಅವರು ನಟನೆ ಮಾಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ. ಹೀಗಾಗಿ ಅವರೆಲ್ಲರೂ ನಿಜವಾಗಿಯೂ ಅವರ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದರು. ಪ್ರೋಮೋವನ್ನ ಈ ರೀತಿಯಾಗಿ ಕಟ್ ಮಾಡಿದ್ದಕ್ಕೆ ಕ್ಷಮಿಸಿ. ಬಹುಶಃ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಬಳಸುವ ಫಾರ್ಮ್ಯಾಟ್ ಇದಾಗಿರಬಹುದು. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆʼ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಖಾಜಿ ತೌಕೀರ್ ಏನ್ ಮಾಡಿದ್ರು?
ಇದಕ್ಕೂ ಮುನ್ನ ಖಾಜಿ ತೌಕೀರ್ ಅವರು ಟಾಸ್ಕ್ವೊಂದರ ಬಳಿಕ ಜೋರಾಗಿ ತಮ್ಮ ಔಷಧಿ ಬೇಕೆಂದು ಕೇಳಿಕೊಂಡಿದ್ದರು. ಇದರಿಂದ ಬಿಗ್ಬಾಸ್ ಮನೆಯಲ್ಲಿದ್ದ ಇತರ ಸ್ಪರ್ಧಿಗಳು ಆತಂಕಗೊಂಡಿದ್ದರು.
ನಂತರ ಬಿಗ್ಬಾಸ್, ಖಾಜಿ ಅವರನ್ನು ವೈದ್ಯಕೀಯ ಕೊಠಡಿಗೆ ತೆರಳಿ ಪರೀಕ್ಷಿಸಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಮೆಡಿಕಲ್ ರೂಮ್ಗೆ ತೆರಳಿದ ಬಳಿಕ ಖಾಜಿ, ತಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರಿಗೆ ತಿಳಿಸಿದ್ದರು. ಆಟದ ಭಾಗವಾಗಿ ತಾನು ನಟನೆ ಮಾಡುತ್ತಿದ್ದೆ ಎಂದು ಕೂಡ ಒಪ್ಪಿಕೊಂಡಿದ್ದರು. ತಾನು ನಟನೆ ಮಾಡುತ್ತಿರುವುದನ್ನು ಕ್ಯಾಮೆರಾಗಳಿಗೆ ತಿಳಿಸಿದ್ದಾಗಿ ಅವರು ಹೇಳಿದ್ದರು.
ಇದಾದ ಬಳಿಕವೂ ಖಾಜಿ ತಮ್ಮ ನಟನೆ ಮುಂದುವರಿಸಿದ್ದರು. ವಿಭಿನ್ನ ಪಾತ್ರಗಳನ್ನ ನಿರ್ವಹಿಸುವ ಮೂಲಕ ವೀಕ್ಷಕರನ್ನು ಮನರಂಜಿಸುವುದು ತಮ್ಮ ಉದ್ದೇಶ ಎಂದು ಹೇಳಿದ್ದರು. ಆದರೆ ಈ ಘಟನೆ ಮನೆಯ ಇತರ ಸ್ಪರ್ಧಿಗಳಲ್ಲಿ ಅವರ ಆರೋಗ್ಯದ ಬಗ್ಗೆ ನಿಜವಾದ ಆತಂಕ ಮೂಡಿಸಿತ್ತು.

ಸಲ್ಮಾನ್ ಖಾನ್ ಏಕೆ ಹೀಗೆ ಮಾಡಿದ್ರು?
ಯಾರಾದರೂ ಅನಾರೋಗ್ಯಕ್ಕೆ ಒಳಗಾದಂತೆ ನಟನೆ ಮಾಡಿ, ಇತರರನ್ನ ಆತಂಕಕ್ಕೀಡು ಮಾಡಿ, ಬಳಿಕ ಅದು ಕೇವಲ ನಟನೆ ಎಂದು ಹೇಳಿದರೆ ಹೇಗಿರುತ್ತದೆ ಎಂಬುದನ್ನ ಖಾಜಿಗೆ ಅರ್ಥ ಮಾಡಿಸುವುದು ಸಲ್ಮಾನ್ ಖಾನ್ ಅವರ ಉದ್ದೇಶವಾಗಿತ್ತು. ಗಂಭೀರವಾದ ಆರೋಗ್ಯ ಸಮಸ್ಯೆಯಂತೆ ಕಾಣುವ ವಿಷಯವನ್ನು ಮನರಂಜನೆಗಾಗಿ ಬಳಸಿದಾಗ, ಅದನ್ನು ನಿಜವೆಂದು ಭಾವಿಸುವವರಿಗೆ ಎಷ್ಟು ಆತಂಕ ಉಂಟಾಗಬಹುದು ಎಂಬುದನ್ನು ತೋರಿಸಲು ಸಲ್ಮಾನ್ ಈ ರೀತಿಯ ನಟನೆ ಮಾಡಿದ್ದರು ಎಂದಿದೆ ಬಿಗ್ಬಾಸ್ ತಂಡ.

