ಹುಬ್ಬಳ್ಳಿ: ಇಲ್ಲಿನ (Hubballi) ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮದಲ್ಲಿನ ಎರಡು ಎಟಿಎಂಗಳನ್ನು (ATM) ಕಳ್ಳರು ದೋಚಿದ್ದಾರೆ.
ಬೆಳಗಿನ ಜಾವ 3 ಗಂಟೆ ವೇಳೆಗೆ ಶೆಟರ್ನ ಲಾಕ್ ಮುರಿದು, ಗ್ಯಾಸ್ ಕಟರ್ ಬಳಿಸಿ ಒಟ್ಟು 14 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ್ದಾರೆ. ಗುರುತು ಪತ್ತೆಯಾಗದಂತೆ ಸಿಸಿ ಕ್ಯಾಮೆರಾವನ್ನು ಕಳ್ಳರು ದ್ವಂಸ ಮಾಡಿದ್ದಾರೆ. ಗ್ರಾಮದ ನಡುರಸ್ತೆಯಲ್ಲಿ ಈ ಎಟಿಎಂಗಳಿದ್ದರೂ, ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ರಸ್ತೆ ಮೇಲೆ ಮಲಗಿ ಕುಡುಕನ ಹೈಡ್ರಾಮಾ – ಸಾಲುಗಟ್ಟಿ ನಿಂತ ವಾಹನಗಳು
ಸುಳ್ಳ ಗ್ರಾಮದ ಎಟಿಎಂನಲ್ಲಿ 11 ಲಕ್ಷ ರೂ. ಹಾಗೂ ಬ್ಯಾಹಟ್ಟಿ ಗ್ರಾಮದ ಎಟಿಎಂನಲ್ಲಿ 3 ಲಕ್ಷ ರೂ. ಹಣ ದೋಚಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ವಿನೋದ್ ಮುಕ್ತೆದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ, ಆ್ಯಸಿಡ್ ದಾಳಿ

