ಬೆಂಗಳೂರು: ಗೌರಿ-ಗಣೇಶ ಹಬ್ಬವನ್ನು ಪಬ್ಲಿಕ್ ಟಿವಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಮೂರನೇ ದಿನವಾದ ಇಂದು ಗಣೇಶನ ವಿಸರ್ಜನೆ ಮಾಡಲಾಯಿತು.
ಪಬ್ಲಿಕ್ ಟಿವಿ ಕಚೇರಿಯಲ್ಲಿ 14ನೇ ವರ್ಷದ ಗಣೇಶೋತ್ಸವವನ್ನು 3 ದಿನಗಳ ಕಾಲ ಆಯೋಜಿಸಲಾಗಿತ್ತು. ಇಂದು ಮೂರನೇ ದಿನ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಪೂಜೆ ಸಲ್ಲಿಸಿದ್ರು. ಸಿಇಒ ಅರುಣ್ ಕುಮಾರ್, ಸಂಪಾದಕರಾದ ದಿವಾಕರ್ ಹಾಗೂ ಸಿಬ್ಬಂದಿ ಪೂಜೆಯಲ್ಲಿ ಭಾಗವಹಿಸಿದ್ದರು.
ಬಳಿಕ ಪ್ರಸಾದ ವಿತರಣೆ ಮಾಡಿ ಜೆಪಿ ಪಾರ್ಕ್ನ ಕಲ್ಯಾಣಿಯಲ್ಲಿ ಗಣೇಶನ ವಿಸರ್ಜನೆ ಮಾಡಲಾಯಿತು.

