BBK 13 : ಬಿಗ್‌ಬಾಸ್ ಮನೆಯಲ್ಲಿ ಮತ್ತೇ ಬಳೆ ವಿವಾದ ಶುರುವಾಗಿದೆ. ಸೀಸನ್ 10ರಲ್ಲಿ ಸಂಚಲನ ಮೂಡಿಸಿದ್ದ ಈ ವಿಚಾರ ಈಗ ಮತ್ತೇ ಈ ಸೀಸನ್‌ನಲ್ಲೂ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಬಿಗ್‌ಬಾಸ್ ಸೀಸನ್ 13ರಲ್ಲಿ ಮಾತಿನ ಭರದಲ್ಲಿ, ಆಥವಾ ಟಾಸ್ಕ್ ಆಡುವಾಗ, ಗೊತ್ತೋ ಗೊತ್ತಿಲ್ಲದೆಯೋ ದೊಡ್ಮನೆಯ ನಿಯಮಗಳನ್ನು ಕಂಟೆಸ್ಟಂಟ್‌ಗಳು ಬ್ರೇಕ್ ಮಾಡ್ತಿರೋದು ಕ್ಲೀಯರ್ ಆಗಿ ಕಾಣ್ತಿದೆ. ಆದರೆ, ಹೊಸ ವಿಚಾರವೇನೆಂದ್ರೆ ಸೀಸನ್ 10ರಲ್ಲಿ ದೊಡ್ಡ ವಿವಾದ ಸೃಷ್ಟಿಸಿದ ಬಳೆ ವಿಚಾರ ಈಗ ಮತ್ತೇ ಭುಗಿಲೆದ್ದಿದೆ.
ಬಿಗ್ ಬಾಸ್ ಸೀಸನ್ 10ರಲ್ಲಿ ವಿನಯ್ ಗೌಡ ಅವರು ‘ಬಳೆ ತೊಟ್ಟುಕೊಳ್ಳಿ’ ಎಂದು ಹೇಳಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ವಿನಯ್ ಗೌಡ ಅವರಿಗೆ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದರು.
ಇದೀಗ ಅದೇ ರೀತಿಯ ಹೇಳಿಕೆಯನ್ನು ಕಿರಣ್ ಶಾಸ್ತ್ರಿ ನೀಡಿದ್ದಾರೆ. ಟಾಸ್ಕ್ ವೇಳೆ ಕಿರಣ್ ಅವರ ಮಾತಿಗೆ ಮನೆಯ ಇತರ ಸ್ಪರ್ಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್‌ವೊಂದರ ವೇಳೆ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಸಹ-ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಿರಣ್ ಶಾಸ್ತ್ರಿ, ‘ಬಳೆ ಹಾಕಿಕೊಂಡು ಕೂತ್ಕೊಂಡು ಬಿಡಿ ಎಲ್ಲರೂ’ ಎಂದು ಗಟ್ಟಿಯಾಗಿ ಕಿರುಚಿದ್ದಾರೆ.
ಕಿರಣ್ ಅವರ ಈ ಮಾತು ಕೇಳುತ್ತಿದ್ದಂತೆ ಮನೆಯ ಇತರ ಸ್ಪರ್ಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಳೆ ಹಾಕಿಕೊಂಡರೆ ಏನು? ಬಳೆ ಹಾಕಿಕೊಂಡರೆ ಏನು ತಪ್ಪು?’ ಎಂದು ಗಗನ್ ಪ್ರಶ್ನಿಸಿದ್ದಾರೆ.
ಮತ್ತೆ ಶುರುವಾಯ್ತು ‘ಬಳೆ’ ವಿವಾದ
ಲಿಂಗ ತಾರತಮ್ಯ ಅಥವಾ ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ರೀತಿಯಲ್ಲಿ ‘ಬಳೆ ಹಾಕಿಕೊಳ್ಳಿ’ ಎಂಬ ಮಾತನ್ನು ಬಳಸಬಾರದು ಎಂಬ ಆಕ್ಷೇಪ ವ್ಯಕ್ತವಾಗಿದೆ. ಕಿರಣ್ ಶಾಸ್ತ್ರಿ ಅವರ ಹೇಳಿಕೆಗೆ ಮನೆಯ ಸ್ಪರ್ಧಿಗಳೇ ವಿರೋಧ ವ್ಯಕ್ತಪಡಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಓಂ ಪ್ರಕಾಶ್ ಹೊರಬಂದಿದ್ಯಾಕೆ?
ಈ ಹಿಂದೆ ಸೀಸನ್ 10ರಲ್ಲಿ ವಿನಯ್ ಗೌಡ ಇದೇ ರೀತಿಯ ಹೇಳಿಕೆ ನೀಡಿದ್ದಾಗ, ಕಿಚ್ಚ ಸುದೀಪ್ ಅವರು ‘ಬಳೆ’ ಎಂಬುದು ಸ್ತ್ರೀ ಶಕ್ತಿಯ ಸಂಕೇತವಾಗಿದ್ದು, ಅದನ್ನು ಕೀಳಾಗಿ ಅಥವಾ ಅಸಮರ್ಥತೆಯ ಸಂಕೇತವಾಗಿ ಬಳಸಬಾರದು ಎಂದು ಎಚ್ಚರಿಸಿದ್ದರು.
ಇದೀಗ ಕಿರಣ್ ಶಾಸ್ತ್ರಿ ಕೂಡ ಇದೇ ರೀತಿಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ವಾರದ ವೀಕೆಂಡ್ ಸಂಚಿಕೆ ಮೇಲೆ ವೀಕ್ಷಕರ ಗಮನ ನೆಟ್ಟಿದೆ. ಕಿಚ್ಚ ಸುದೀಪ್ ಅವರು ಕಿರಣ್ ಶಾಸ್ತ್ರಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಯಾವ ರೀತಿಯಲ್ಲಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ.ಇದನ್ನೂ ಓದಿ: ಮಂಗಳ ಗೌರಿಗಾಗಿ ಒಂದಾದ ಮಾಲಾಶ್ರೀ, ರುಕ್ಮಿಣಿ ವಸಂತ್

