– ಏಷ್ಯಾ ಕಪ್ ಫೈನಲ್
– 72 ರನ್‌ಗಳ ಭರ್ಜರಿ ಜಯ
ದುಬೈ: ಏಷ್ಯಾ ಕಪ್(Asia Cup Final) ಫೈನಲಿನಲ್ಲಿ ಶ್ರೀಲಂಕಾ ವಿರುದ್ಧ 72 ರನ್‌ಗಳ ಜಯ ಸಾಧಿಸಿದ ಭಾರತ(India) 8ನೇ ಬಾರಿ ಚಾಂಪಿಯನ್(Champion) ಪಟ್ಟವನ್ನು ಅಲಂಕರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಈ ಸವಾಲನ್ನು ಬೆನ್ನಟ್ಟಿದ ಲಂಕಾ 20 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಈ ಗುರಿಯನ್ನು ಬೆನ್ನಟ್ಟಿದ ಲಂಕಾ ಪರವಾಗಿ ನಾಯಕಿ ಚಾಮರಿ ಅಟ್ಟಪಟ್ಟು 36 ರನ್(32 ಎಸೆತ, 4 ಬೌಂಡರಿ, 2 ಸಿಕ್ಸ್) ವಿಶ್ಮಿ ಗುಣರತ್ನೆ 20 ರನ್ ಹೊಡೆದು ಔಟಾದರು.
BIG BIG WICKET 👀
An in-form Deepti Sharma gives India the breakthrough they needed, dismissing the Captain 👏
Watch the #DPWorldWomensAsiaCup2026 FINAL LIVE NOW on Sony Sports Network TV channels & Sony LIV.#SonySportsNetwork #SonyLIV #NotAGentlemansGame… pic.twitter.com/m0wZfsqsyq
— Sony Sports Network (@SonySportsNetwk) September 13, 2026
ಶ್ರೀಲಂಕಾ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇನ್ನಿಂಗ್ಸ್ 10ನೇ ಓವರ್ ಎಸೆದ ದೀಪ್ತಿ ಶರ್ಮಾ ಅವರ 3ನೇ ಎಸೆತದಲ್ಲಿ ಚಾಮರಿ ಅಟ್ಟಪಟ್ಟು ಸ್ಟಂಪ್ ಔಟಾದರೆ ವಿಶ್ಮಿ ಗುಣರತ್ನೆ ಬೌಲ್ಡ್ ಆಗಿದ್ದು ಪಂದ್ಯಕ್ಕೆ ರೋಚಕ ತಿರುವು ನೀಡಿತು.
ಶ್ರೀ ಚರಣಿ 4 ವಿಕೆಟ್ ಕಿತ್ತರೆ, ದೀಪ್ತಿ ಶರ್ಮಾ 3 ವಿಕೆಟ್ ಪಡೆದರು. ಕ್ರಾಂತಿ ಗೌಡ್, ಶಫಾಲಿ ವರ್ಮಾ, ಪ್ರೇಮಾ ರಾವತ್ ತಲಾ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಮಳೆ ಸುರಿಸಿದ ಶರ್ಮಾ- ಭಾರತಕ್ಕೆ ಗೆಲುವಿನ `ಅಭಿಷೇಕʼ
ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ 77 ಎಸೆತಗಳಲ್ಲಿ 129 ರನ್ ಜೊತೆಯಾಟವಾಡಿ ಭದ್ರವಾದ ಭುನಾದಿ ಹಾಕಿಕೊಟ್ಟರು.
ಸ್ಫೋಟಕ ಬ್ಯಾಟ್ ಮಾಡುತ್ತಿದ್ದ ಶಫಾಲಿ ವರ್ಮಾ ಸಿಕ್ಸ್ ಸಿಡಿಸಲು ಹೋಗಿ 68 ರನ್(39 ಎಸೆತ, 9 ಬೌಂಡರಿ, 2 ಸಿಕ್ಸ್) ಗಳಿಸಿದ್ದಾಗ ಔಟಾದರು. ನಂತರ ಉತ್ತಮವಾಗಿ ಆಡುತ್ತಿದ್ದ ಸ್ಮೃತಿ ಮಂಧಾನ 59 ರನ್(39 ಎಸೆತ, 5 ಬೌಂಡರಿ, 3 ಸಿಕ್ಸ್) ಗಳಿಸಿದ್ದಾಗ ರನೌಟ್ ಆದರು.
Shafali Verma putting her full range on display. 😍
Watch #INDvSL in the Final of the #DPWorldWomensAsiaCup2026, LIVE NOW on Sony Sports Network TV channels & Sony LIV.#SonySportsNetwork #SonyLIV #NotAGentlemansGame pic.twitter.com/XWN1qoGzYB
— Sony Sports Network (@SonySportsNetwk) September 13, 2026
ಕೊನೆಯಲ್ಲಿ ಪತನ:
17 ಓವರ್ ನಷ್ಟಕ್ಕೆ 2 ವಿಕೆಟ್ ಕಳೆದುಕೊಂಡು 160 ರನ್‌ಗಳಿಸಿದ್ದ ಭಾರತ 23 ರನ್ ಗಳಿಸುವಷ್ಟರಲ್ಲಿ ಪ್ರಮುಖವಾದ 3 ವಿಕೆಟ್ ಕಳೆದುಕೊಂಡಿತ್ತು. ಇದರಿಂದಾಗಿ 200 ರನ್ ಗಳಿಸುವ ಕನಸು ಕಮರಿಹೋಯ್ತು. ಕೊನೆಯಲ್ಲಿ ಕಮಲಿನಿ 15 ರನ್(5 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿದ ಪರಿಣಾಮ ಭಾರತ 180 ರನ್‌ಗಳ ಗಡಿಯನ್ನು ದಾಟಿತು.
8ನೇ ಬಾರಿ ಚಾಂಪಿಯನ್
2004, 2005–06, 2006, 2008, 2012, 2016, 2022 ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. 2018 ಮತ್ತು 2024 ರಲ್ಲಿ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿತ್ತು. ಈಗ ಹಾಲಿ ಚಾಂಪಿಯನ್ ತಂಡವನ್ನು ಶ್ರೀಲಂಕಾವನ್ನು ಸೋಲಿಸಿ ಮತ್ತೆ ಪ್ರಶಸ್ತಿಯನ್ನು ಕೈವಶ ಮಾಡಿಕೊಂಡಿದೆ.

