ಶಿವಮೊಗ್ಗ: ಈಜಲು (Swimming) ಹೋಗಿದ್ದ ಬಾಲಕ (Boy) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ (Shivamogga) ನಗರ ಹೊರವಲಯದ ಸೋಮಿನಕೊಪ್ಪದಲ್ಲಿ ನಡೆದಿದೆ.
ಸೋಮಿನಕೊಪ್ಪದ ನಿವಾಸಿ ಮೊಹಮ್ಮದ್ ಬುರ್ಹಾನ್ (16) ಮೃತ ಬಾಲಕ. ಸೋಮಿನಕೊಪ್ಪದ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮೊಹಮ್ಮದ್ ಬುರ್ಹಾನ್ ಭಾನುವಾರವಾದ್ದರಿಂದ ಇಂದು ಸೋಮಿನಕೊಪ್ಪ ಕೆರೆಗೆ ಈಜಲು ತೆರಳಿದ್ದ. ಈ ವೇಳೆ ಕೆರೆಯಲ್ಲಿ ಈಜಲಾಗದೇ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ಪ್ರಿಯಾಂಕ್ ಜೈಲು ಸೇರುವ ಕಾಲ ಹತ್ತಿರ ಬಂದಿದೆ; ಗಣೇಶೋತ್ಸವಕ್ಕಾಗಿ ನಾನು ಜೈಲಿಗೆ ಹೋಗಲೂ ಸಿದ್ಧ: ಪ್ರತಾಪ್ ಸಿಂಹ ತಿರುಗೇಟು
ಸ್ಥಳೀಯರಿಂದ ಪೊಲೀಸ್&ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸೋಮಿನಕೊಪ್ಪ ಕೆರೆಯಲ್ಲಿ ಅಗ್ನಿಶಾಮಕ ದಳದಿಂದ ಬಾಲಕನಿಗಾಗಿ ಶೋಧ ನಡೆಸಿದ್ದಾರೆ. ತೀವ್ರ ಶೋಧದ ಬಳಿಕ ಬಾಲಕನ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ‘ಮುಂದಿನ ಜನ್ಮ ಇದ್ದರೆ ನಿನ್ನವನಾಗಿ ಹುಟ್ಟುವೆ’ – ಇನ್ಸ್ಟಾದಲ್ಲಿ ಪೋಸ್ಟ್ ಹಾಕಿ ಯುವಕ ಆತ್ಮಹತ್ಯೆ

