ಹುಬ್ಬಳ್ಳಿ: ನಗರದಲ್ಲಿ (Hubballi) ಗಣಪತಿಯನ್ನು (Ganesha Festival) ತರುವಾಗ ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣ ನಡೆದಿದೆ.
ಸೆ.12 ರ ರಾತ್ರಿ 9:30ರ ವೇಳೆಗೆ ಈ ಘಟನೆ ನಡೆದಿದೆ. ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ಹೋಗುವ ರಸ್ತೆಯ ಬಳಿ ಮೇದಾರ್ ಓಣಿಯ ಗಣಪತಿ ಮತ್ತು ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾದವು. ಈ ವೇಳೆ ಕಲಾಲ್ ಓಣಿಯ ಗಣಪತಿ ಡಿಜೆ ಮುಂದೆ ಕೆಲವು ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಅವರನ್ನು 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಬಲಪ್ರಯೋಗ ಮಾಡಿ ಅಲ್ಲಿಂದ ಚದುರಿಸಲಾಯಿತು ಎಂದು ಪೊಲೀಸ್ ಕಮಿಷನರ್ ಭೂಷಣ ಬೋರಸೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು ಹಿಂದೂ ಮಹಾ ಗಣಪತಿಗೆ 4 ಕೆಜಿ ಬೆಳ್ಳಿ ಕಿರೀಟ, 1 ಕೆಜಿಯ ಬೆಳ್ಳಿ ಆಯುಧ ಗಿಫ್ಟ್!
ಈ ಸಂಬಂಧ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಅಧಿಕೃತ ವಾಟ್ಸ್ ಆಪ್ ಖಾತೆಯಿಂದ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗೌರಿ ಗಣೇಶ ಹಬ್ಬಕ್ಕೆ ಕೊಡಗಿನ ಪೊಲೀಸ್ ಕಟ್ಟುನಿಟ್ಟಿನ ಕ್ರಮ – ಮೆರವಣಿಗೆ ರೂಟ್ ಬದಲಿಸಿದ್ರೆ ಕ್ರಮ, ಡಿಜೆ ಸೌಂಡ್‌ಗೆ ಬ್ರೇಕ್

