ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಜಾರಿ ನಿರ್ದೇಶನಾಲಯದ (ED) ನಿರ್ದೇಶಕ ರಾಹುಲ್ ನವೀನ್ (Rahul Navin) ಅವರು ಆಗಮಿಸಿದ್ದಾರೆ.
ಕೆಪಿಎಸ್ಸಿ ಹಗರಣ, ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ದಾಳಿ, ಮುಡಾ ಹಗರಣ, ವಾಲ್ಮೀಕಿ ಪ್ರಕರಣಗಳ ಪ್ರಗತಿ ಪರಿಶೀಲನೆಯನ್ನು ರಾಹುಲ್ ನವೀನ್ ಅವರು ನಡೆಸಲಿದ್ದಾರೆ.
ಇ.ಡಿ ನಿರ್ದೇಶಕ ಹಾಗೂ ನಾಲ್ಕು ಜನ ಸ್ಪೆಷಲ್ ಡೈರೆಕ್ಟರ್ಸ್ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಪ್ರಕರಣಗಳ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ.

