ಬೆಂಗಳೂರು: ಬಿಜೆಪಿ ನಾಯಕರು ಮತ್ತೊಂದು ಸುತ್ತಿನ ಪಾದಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ. ಸಂಪೂರ್ಣ ‘ವಂದೇ ಮಾತರಂ’ಗಾಗಿ (Vande Mataram) ಸೆಪ್ಟೆಂಬರ್ 15ರಿಂದ 5 ದಿನಗಳ ಕಾಲ ಪಾದಯಾತ್ರೆ (BJP Padayatra) ನಡೆಯಲಿದೆ.
ರಾಜ್ಯ ಸರ್ಕಾರದ ವಂದೇ ಮಾತರಂ ದ್ವಂದ್ವದ ವಿರುದ್ಧ ಬಿಜೆಪಿ ಸಮರ ಸಾರಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ಒಂದೊಂದು ಕಿ.ಮೀ. ಪಾದಯಾತ್ರೆ ನಡೆಸಿ ತಹಸೀಲ್ದಾರ್ ಭೇಟಿಯಾಗಿ ಹಕ್ಕೊತ್ತಾಯ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಇದನ್ನೂ ಓದಿ: ವಂದೇ ಮಾತರಂ ಗೀತೆ ಕಡ್ಡಾಯ ವಿಚಾರ – ಎರಡೇ ಚರಣ ಹಾಡಲು ರಾಜ್ಯ ಸರ್ಕಾರ ಆದೇಶ
ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ 2 ಚರಣ ಮಾತ್ರ ವಂದೇ ಮಾತರಂ ಹಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಮಾತ್ರ ಸಂಪೂರ್ಣ ವಂದೇ ಮಾತರಂ ಹಾಕಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಡಿ.ಕೆ.ಶಿವಕುಮಾರ್ ಸರ್ಕಾರದ ಆದೇಶದ ವಿರುದ್ಧ ವಿಜಯೇಂದ್ರ ಕೆಂಡಕಾರಿದ್ದಾರೆ.
ರಾಷ್ಟ್ರ ಧ್ವಜವನ್ನೇ ಹಾರಿಸದವರು, ರಾಷ್ಟ್ರಗೀತೆಯನ್ನೇ ಹೇಳದವರಿಗೆ ನಮ್ಮನ್ನ ಟೀಕೆ ಮಾಡುವ ನೈತಿಕತೆ ಇದ್ಯಾ ಎಂದು ಮಾಗಡಿಯಲ್ಲಿ ಸಚಿವ ಹೆಚ್.ಸಿ.ಬಾಲಕೃಷ್ಣ ಪ್ರಶ್ನಿಸಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಬಿಜೆಪಿ ಅವರು ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್ ಶಾ ಟೆಲಿಪ್ರಾಂಪ್ಟರ್ ಇಲ್ಲದೆ ಪೂರ್ತಿ ವಂದೇ ಮಾತರಂ ಹಾಡಿದ್ರೆ ರಾಜೀನಾಮೆ ಕೊಡ್ತೀನಿ: ಪ್ರಿಯಾಂಕ್ ಖರ್ಗೆ
ಈ ಮಧ್ಯೆ, ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿತ್ತು. ಅದಕ್ಕೆ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದಾರೆ. ನಾವೂ ಶೀಘ್ರವೇ ಬಳ್ಳಾರಿಯಲ್ಲೇ ಸಾಧನಾ ಸಮಾವೇಶ ಮಾಡ್ತೇವೆ ಎಂದು ಮಾಜಿ ಸಚಿವ ನಾಗೇಂದ್ರ ಹೇಳಿದ್ದಾರೆ.

