ಕಲಬುರಗಿ: ನೇಣು ಬಿಗಿದುಕೊಂಡು ಯುವಕ ಹಾಗೂ ಮಹಿಳೆ (Woman) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ತಾಪುರ (Chittapur) ತಾಲೂಕಿನ ಸಂಕನೂರು ಗ್ರಾಮದ ಹೊರವಲಯದಲ್ಲಿರುವ ಗುಡ್ಡದಲ್ಲಿ ನಡೆದಿದೆ.
ಚಿತ್ತಾಪುರ ಪಟ್ಟಣದ ಶರಣಮ್ಮ (32) ಹಾಗೂ ಯಾದಗಿರಿ ಜಿಲ್ಲೆ ಬಾಚವಾರ ಗ್ರಾಮದ ಬಸವರಾಜ್ (21) ಆತ್ಮಹತ್ಯೆ ಶರಣಾದ ದುರ್ದೈವಿಗಳು. ಇವರಿಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಗೆ (Love) ಕುಟುಂಬಸ್ಥರು ವಿರೋಧಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪರಪುರುಷನೊಂದಿಗೆ ಲವ್ವಿಡವ್ವಿ – ಹಾಸಿಗೆ ಹಿಡಿದ ಪತಿ ಕೊಂದು ಹೃದಯಾಘಾತ ಅಂತ ನಾಟಕವಾಡಿದ್ದ ಹೈನಾತಿ
ಕಳೆದ ಎರಡು ಮೂರು ದಿನದ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪತ್ನಿ, ಮೂವರು ಹೆಣ್ಣುಮಕ್ಕಳ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ಕ್ರೂರಿ

