ಬೆಂಗಳೂರು: ವೀಕೆಂಡ್ ಮತ್ತು ಗಣೇಶ ಹಬ್ಬದ (Ganesha Festival) ಸಾಲು ಸಾಲು ರಜೆಗಳಿಂದಾಗಿ ಬೆಂಗಳೂರಿನಿಂದ (Bengaluru) ಸಾವಿರಾರು ಜನ ತಮ್ಮ ತಮ್ಮ ಊರುಗಳತ್ತ ಜನ ಹೊರಟಿದ್ದಾರೆ. ಇದರಿಂದ ಪ್ರಮುಖ ಮಾರ್ಗಗಳಲ್ಲಿ ಭಾರೀ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.
ಶನಿವಾರ, ಭಾನುವಾರ ಮತ್ತು ಸೋಮವಾರ ಗಣೇಶ ಹಬ್ಬ ಹಿನ್ನೆಲೆ ಜನ ಊರುಗಳತ್ತ ಹೊರಟಿದ್ದಾರೆ. ಗೋವರ್ಧನ್, ಮೈಸೂರು ರೋಡ್, ಟಿನ್ ಫ್ಯಾಕ್ಟರಿ, ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭಾರೀ ಜನ ಸೇರಿದ್ದಾರೆ. ಇದನ್ನೂ ಓದಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ನರಗುಂದ ಬಂದ್
ನವಯುಗ ಟೋಲ್ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಳಗ್ಗೆಯಿಂದಲೇ ಜನ ಊರುಗಳತ್ತ ಹೊರಟಿದ್ದಾರೆ. ಪೀಣ್ಯ ಫ್ಲೈ ಓವರ್ ಮೇಲಿಂದ ಬರುವ ವಾಹನಗಳು ಟೋಲ್ ಬಳಿ ಬರುತ್ತಿದ್ದಂತೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಳ್ಳುತ್ತಿವೆ. ಇದನ್ನೂ ಓದಿ: ಟ್ರೆಂಡ್ ಗೀಳಿಗೆ ಬಿದ್ದು ಟ್ರ್ಯಾಪ್ ಆಗ್ಬೇಡಿ – 80s ಫೋಟೊ ಟ್ರೆಂಡ್ ಬಗ್ಗೆ ಪೊಲೀಸರ ಎಚ್ಚರಿಕೆ!

