ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗಳನ್ನ (Potholes) ಪತ್ತೆ ಹಚ್ಚುವುದಕ್ಕೆ ಎಐ (AI) ಬಳಕೆಗೆ ಜಿಬಿಎ ಮುಂದಾಗಿದೆ.
ವಾಹನಗಳ ಡ್ಯಾಶ್ಬೋರ್ಡ್, ನಗರ ಪಾಲಿಕೆಯ ಕಸದ ಗಾಡಿಗಳು ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಿಗೆ ಎಐ ಕ್ಯಾಮೆರಾ, ಜಿಪಿಎಸ್ (GPS) ಮತ್ತು ಆಕ್ಸಿಲರೋಮೀಟರ್ ಸೆನ್ಸಾರ್ಗಳನ್ನು ಅಳವಡಿಸಲಾಗುತ್ತೆ. ಇದನ್ನೂ ಓದಿ: ಮಂಡ್ಯ | ಟೀ ಡೇನಲ್ಲಿ ಸಿಲಿಂಡರ್ ಸ್ಫೋಟ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮ

ಜಿಪಿಎಸ್ ಮೂಲಕ ಗುಂಡಿ ಇರುವ ನಿಖರವಾದ ಸ್ಥಳ ಮತ್ತು ಅದರ ಭಾವಚಿತ್ರವನ್ನ ಕ್ಲಿಕ್ ಮಾಡಿ, ತಕ್ಷಣವೇ ಸಂಬಂಧಪಟ್ಟ ನಗರ ಪಾಲಿಕೆ , ಗುತ್ತಿಗೆದಾರರಿಗೆ ಇಮೇಲ್ ಅಲರ್ಟ್ ಮೂಲಕ ಕಳುಹಿಸಲಾಗುತ್ತದೆ. ಈ ರೀತಿ ಡ್ಯಾಶ್ ಬೋರ್ಡ್ ಗಳಲ್ಲಿ ಕ್ಯಾಮೆರ ಇಟ್ಟು ಗುಂಡಿಗಳನ್ನ ಪತ್ತೆಮಾಡಲು ಮುಂದಾಗಿದೆ.
ಈಗಾಗಲೇ ಪೂರ್ವ ಪಾಲಿಕೆಯಲ್ಲಿ ಎಐ ನಿಂದ ರಸ್ತೆಗುಂಡಿಗಳನ್ನ ಪತ್ತೆಹಚ್ಚಲಾಗಿದೆ ಸುಮಾರು 22 ಸಾವಿರ ಗುಂಡಿ ಇವೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಜಿಬಿಎ ಎಐ ಕ್ಯಾಮೆರಾ ಮೂಲಕ ಗುಂಡಿ ಪತ್ತೆಹಚ್ಚಿ ಮುಚ್ಚುವುದಕ್ಕೆ ಮುಂದಾಗ್ತಿದೆ. ಇದನ್ನೂ ಓದಿ: BRICS Summit | ವರ್ಷಗಳ ಹಿಂದೆಯೆ ಅರ್ಜಿ ಸಲ್ಲಿಸಿದ್ರೂ ಪಾಕಿಸ್ತಾನಕ್ಕೆ ಸಿಗದ ಬ್ರಿಕ್ಸ್ ಸದಸ್ಯತ್ವ

