– ಆನ್ ಸ್ಕ್ರೀನ್ ವೈಫ್, ಆಫ್ ಸ್ಕ್ರೀನ್ ವೈಫ್ ಕಿತ್ತಾಡಿದ್ರೇ ಎಲ್ಲಿಗ್ ಸಾರ್ ಹೋಗ್ಲಿ ಅಂತಾರೆ ಸುದರ್ಶನ್
‘ಬಿಗ್ ಬಾಸ್ ಕನ್ನಡ ಸೀಸನ್-13’ ಗ್ರ್ಯಾಂಡ್ ಟೇಕಾಫ್ಗೆ ಇನ್ನು ಕೆಲವೇ ಗಂಟೆಗಳು ಬಾಕಿಯಿದೆ. ಈ ಹೊತ್ತಿನಲ್ಲೇ ಶೋ ಬಿಗ್ಬಾಸ್ ಶೋ ವೇದಿಕೆಯಿಂದ ಫಸ್ಟ್ ಪ್ರೋಮೋ ರಿಲೀಸ್ ಬಿಡುಗಡೆ ಆಗಿದೆ. ಸ್ಪರ್ಧಿಗಳ ಬಗ್ಗೆ ಈಗಾಗಲೇ ಸುಳಿವು ಕೂಡ ಸಿಕ್ಕಿದೆ. ಮೊದಲ ಪ್ರೋಮೋದ ಸಸ್ಪೆನ್ಸ್ ಏನಪ್ಪ ಅಂದ್ರೆ ಡಬಲ್ ಸ್ಪರ್ಧಿಗಳಿಬ್ಬರೂ ಒಂದೇ ಟೈಮಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಸಂಗೀತಾ ಭಟ್ & ಕಾವ್ಯ ಗೌಡ ಮನೆ ಒಳಗೆ; ಸುದರ್ಶನ್ ಪರಿಸ್ಥಿತಿ ದೇವ್ರೇ ಗತಿ!
ಬಿಗ್ ಬಾಸ್ Grand Take Off | ಇಂದು ಸಂಜೆ 7#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/PQsqrQFzZX
— Colors Kannada (@ColorsKannada) September 6, 2026
ಸಿನಿಮಾ ನಟಿ ಸಂಗೀತಾ ಭಟ್ ಮತ್ತು ಸೀರಿಯಲ್ ನಟಿ ಕಾವ್ಯ ಗೌಡ ಇಬ್ರೂ ಕೂಡ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಇದರ ಮಧ್ಯೆ ಕಿಚ್ಚ ಸುದೀಪ್ ಮುಂದೆಯೇ ಸಖತ್ ಕ್ವಾಟ್ಲೆ ಮಾಡಿದ್ದಾರೆ ಸಂಗೀತಾ ಭಟ್ ಪತಿಯೂ ಆಗಿರುವ ಸೀರಿಯಲ್ ನಟ ಸುದರ್ಶನ್ ರಂಗಪ್ರಸಾದ್.
ಒಂದೇ ಸೀರಿಯಲ್ನ ಡಬಲ್ ಜೋಡಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ʻತಾಂಡವ್ʼ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್ ಅಭಿನಯಿಸಿದ್ದಾರೆ. ಹಾಗೇ ಇವರ ಪತ್ನಿ ಮತ್ತು ಪ್ರೇಯಸಿಯಾಗಿ ಶ್ರೇಷ್ಠಾ ಪಾತ್ರದಲ್ಲಿ ಕಾವ್ಯ ಗೌಡ ಮಾಡಿದ್ದರು. ಸುದರ್ಶನ್ ಸೀರಿಯಲ್ ಮುಗಿಯತ್ತಿದ್ದಂತೆ ಯಾವುದೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿರಲಿಲ್ಲ. ಸದ್ಯ ಈ ಜೋಡಿ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದೆ. ಸುದರ್ಶನ್ ಆಡಿಯನ್ಸ್ ಸ್ಟೇಜಲ್ಲಿ ಕುಳಿತು ಕ್ವಾಟ್ಲೆ ಮಾಡಿದ್ರೆ, ಕಾವ್ಯ ಬಿಗ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಸುದರ್ಶನ್ ಅವರ ಪತ್ನಿಯೂ ಆಗಿರೋ ನಟಿ ಸಂಗೀತಾ ಭಟ್ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಾವ್ಯ ಗೌಡ ಮತ್ತು ಸಂಗೀತಾ ಭಟ್ ಅವರು ಒಟ್ಟಿಗೆ ಸ್ಟೇಜ್ಗೆ ಬಂದಿದ್ದಾರೆ. ಇಬ್ಬರ ಕುರಿತು ಸಖತ್ ಪ್ರೋಮೋ ಕಟ್ ಆಗಿದೆ. ಆದ್ರೆ ಸುದರ್ಶನ್ ಸಖತ್ ಕ್ವಾಟ್ಲೆ ಮಾಡಿದ್ದಾರೆ, ʻಆನ್ ಸ್ಕ್ರೀನ್ ವೈಫ್, ಆಫ್ ಸ್ಕ್ರೀನ್ ವೈಫ್ ಕಿತ್ತಾಡಿದ್ರೇ ಎಲ್ಲಿಗ್ ಸರ್ ಹೋಗ್ಲಿ? ಅಂತ ಕಿಚಾಯಿಸಿದ್ದಾರೆ, ಇದಕ್ಕೆ ಕಿಚ್ಚ ಸುದೀಪ್ ಸೇರಿದಂತೆ ದೊಡ್ಮನೆ ಮಂದಿಯಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಕೊನೆಯಲ್ಲಿ ನೀನು ಸ್ವಲ್ಪ ಹುಷಾರಾಗಿರು ಅಂತ ಪತ್ನಿಗೆ ಕಿವಿ ಮಾತು ಹೇಳಿದ್ದಾರೆ ನಟ ಸುದರ್ಶನ್.
ಒಟ್ಟಿನಲ್ಲಿ ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸ್ಟಾರ್ಟ್ ಆಗೋದಕ್ಕೆ ಇನ್ನೂ ಕೆಲವೇ ಗಂಟೆಬಾಕಿಯಿದೆ. ಈ ಹೊತ್ತಿನಲ್ಲೇ ರಿಲೀಸ್ ಮಾಡಲಾಗಿರುವ ಫಸ್ಟ್ ಪ್ರೋಮೋ ಪ್ರೇಕ್ಷಕರಿಗೆ ಸಖತ್ ಮಜಾ ಕೊಟ್ಟಿದೆ.
