– ಮನೆಗೆ ಲಕ್ಷ್ಮೀ ಬಂದಿದ್ದಾಳೆಂದು ಆನಂದ ವ್ಯಕ್ತಪಡಿಸಿದ ಅಜ್ಜಿ, ಅಜ್ಜ, ತಂದೆ
ಮುಂಬೈ: ಹೆಣ್ಣು ಮಗು ಬೇಡ ಎಂದು ಭ್ರೂಣ ಹತ್ಯೆ ಮಾಡಿಸುವ ಈ ಕಾಲದಲ್ಲಿ ಹೆಣ್ಣು ಮಗು ಜನಿಸಿದೆ ಎಂದು ಕುಟುಂಬವೊಂದು ರಥದಲ್ಲಿ ಕೂರಿಸಿ ಅದ್ದೂರಿಯಾಗಿ ಸ್ವಾಗತಿಸಿರುವ ಘಟನೆ ಮಹಾರಾಷ್ಟ್ರದ (Maharashtra) ಬೀಡ್ನಲ್ಲಿ (Beed) ನಡೆದಿದೆ.
ಹೌದು, ಈ ಕುಟುಂಬದಲ್ಲಿ ಸುಮಾರು 200 ವರ್ಷಗಳ ಅಂದರೆ ನಾಲ್ಕು ತಲೆಮಾರುಗಳ ಬಳಿಕ ಹೆಣ್ಣು ಮಗು ಜನಿಸಿದೆ. ಹೆರಿಗೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕುಟುಂಬಸ್ಥರು ಮಗು ಹಾಗೂ ತಾಯಿಯನ್ನು ರಥದಲ್ಲಿ ಕೂರಿಸಿ, ತಾಳ-ವಾದ್ಯಗಳು ಹಾಗೂ ನೃತ್ಯದೊಂದಿಗೆ ಅದ್ದೂರಿಯಾಗಿ ಮೆರವಣಿಗೆಯಾಗುವ ಮೂಲಕ ಮನೆಗೆ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮೂವರು ಹೊಸ ಟ್ರಸ್ಟಿಗಳ ನೇಮಕ
A baby girl born in Maharashtra’s Beed after nearly 200 years was given a grand welcome as the Dahifale family celebrated the arrival of their first daughter in generations. The newborn was brought home with her mother in a chariot procession accompanied by drums, cymbals and… pic.twitter.com/GnO6UyzkNU
— IndiaToday (@IndiaToday) September 2, 2026
ಹೆಣ್ಣು ಮಗುವಿಗೆ ಗಾರ್ಗಿ ಎಂದು ಹೆಸರಿಡಲಾಗಿದೆ. ಮಗುವಿನ ತಾತ ಲಿಂಬಾಜಿ ದಹೀಫಾಲೆ ಅವರು ಗಾರ್ಗಿ ಕುರಿತು ಮಾತನಾಡುವಾಗ ಭಾವುಕರಾದರು. ಕುಟುಂಬದಲ್ಲಿ ಹೆಣ್ಣು ಮಗು ಇರುವುದು ದೊಡ್ಡ ಭಾಗ್ಯ. ಇಷ್ಟು ವರ್ಷಗಳ ಕಾಲ ನಮ್ಮಲ್ಲಿ ಹೆಣ್ಣು ಮಗು ಇಲ್ಲದಿರುವ ಕೊರಗಿತ್ತು, ಇಂದು ಅದು ಈಡೇರಿದೆ. ಅಲ್ಲದೇ ನನ್ನಿಬ್ಬರೂ ಸೊಸೆಯಂದಿರನ್ನು ನನ್ನ ಸ್ವಂತ ಹೆಣ್ಣುಮಕ್ಕಳಂತೆ ನೋಡಿಕೊಂಡಿದ್ದೇನೆ. ಸಂಗೀತ ಹಾಗೂ ನೃತ್ಯದೊಂದಿಗೆ ತಮ್ಮ ಮೊಮ್ಮಗಳನ್ನು ರಥದಲ್ಲಿ ಮನೆಗೆ ಕರೆತಂದಿರುವುದಕ್ಕೆ ಅತೀವ ಆನಂದ ವ್ಯಕ್ತಪಡಿಸಿದ್ದಾರೆ.
ಮಗುವಿನ ಅಜ್ಜಿ ಸುಖಾ ದಹೀಫಾಲೆ ಮಾತನಾಡಿ, ಮಗುವನ್ನು ಬಹಳ ವಿಜೃಂಭಣೆಯಿಂದ ಸ್ವಾಗತಿಸಲು ಆಸ್ಪತ್ರೆಯಲ್ಲಿಯೇ ಕುಟುಂಬದವರು ನಿರ್ಧರಿಸಿದ್ವಿ. ಇಂದು ನಮ್ಮ ಮನೆಗೆ ಲಕ್ಷ್ಮಿ ಬಂದಿರುವುದಕ್ಕೆ ನಮಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.
ಗಾರ್ಗಿಯ ತಂದೆ ಕೂಡ ಸಂತೋಷವನ್ನು ವ್ಯಕ್ತಪಡಿಸಿ, ಜನಸಾಮಾನ್ಯರು ಸಾಮಾನ್ಯವಾಗಿ ಗಂಡು ಮಗುವನ್ನು ಬಯಸುತ್ತಾರೆ, ಆದರೆ ಹೆಣ್ಣು ಮಗುವನ್ನು ಹೊಂದುವ ಅನುಭವ ಮತ್ತು ಸಂತೋಷವೇ ಬೇರೆ. ಹೆಣ್ಣುಮಕ್ಕಳು ತಂದೆಯೊಂದಿಗೆ ಹೆಚ್ಚು ಆಪ್ತರಾಗಿರುತ್ತಾರೆ. ನಾವು ನಮ್ಮ ಮಗಳನ್ನು ಹೂವಿನಂತೆ ಬೆಳೆಸುತ್ತೇವೆ ಎಂದಿದ್ದಾರೆ.ಇದನ್ನೂ ಓದಿ: ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 100 ಹೊಸ ವಿಮಾನ ನಿಲ್ದಾಣ: 30,000 ಕೋಟಿ ಹೂಡಿಕೆ
