ಬೆಂಗಳೂರು: ಮಂಗೋಲಿಯಾದಲ್ಲಿ ನಡೆದ ವಿಶ್ವ ಟೇಕ್ವಾಂಡೋ ಸ್ಪರ್ಧೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಎನ್‍ಎಫ್‍ಸಿ ಟೀಂ ಚಿನ್ನದ ಬೇಟೆಯಾಡಿದೆ.
ಭಾರತವನ್ನ ಪ್ರತಿನಿಧಿಸಿದ್ದ ಎನ್‍ಎಫ್‍ಸಿಯ ಇಶ್ವಾಕ್ 2 ಚಿನ್ನ ಹಾಗೂ ಮಹಿಮಾ ಪಿ.ಜಿ 1 ಚಿನ್ನದ ಪದಕವನ್ನು ಗಳಿಸಿದ್ದಾರೆ. ಧೃತಿ ದೀಪಕ್ ಶಾಸ್ತ್ರಿ, ಸ್ಮಯಾನ್ ಚೇತನ್, ಪ್ರಕೃತಿ, ಪ್ರಣಮ್ಯ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಇನ್ನುಳಿದಂತೆ ಡಿ.ಸಿ. ಸಿದ್ದೇಶ್ ಹಾಗೂ ದೀಪಕ್ ಮೋಹನ್ ಕಂಚಿನ ಪದಕವನ್ನು ಗಳಿಸಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ

ಒಟ್ಟಾರೆ ಎನ್‍ಎಫ್‍ಸಿ ಟೀಂ 3 ಚಿನ್ನ, 5 ಬೆಳ್ಳಿ, 2 ಕಂಚಿನ ಪದಕ ಪಡೆದಿರುವುದು ವಿಶೇಷ. ಎನ್‍ಎಫ್‍ಸಿಯ ಪವನ್ ಕೆ.ಭಾರತ ತಂಡದ ಕೋಚ್ ಆಗಿರುವುದು ವಿಶೇಷ. ಇದನ್ನೂ ಓದಿ: 15ನೇ ವಯಸ್ಸಿಗೆ ಸೂರ್ಯವಂಶಿ ಮತ್ತೊಂದು ರೆಕಾರ್ಡ್; 57 ವರ್ಷಗಳ ದಾಖಲೆ ಉಡೀಸ್
