ಹಲವು ದಿನಗಳಿಂದ ಹಬ್ಬಿದ್ದ ಉಹಾಪೋಹಗಳ ಬಳಿಕ ಇದೀಗ ರ‍್ಯಾಪರ್ ಬಾದಷಾ (Rapper Badshah) ಹಾಗೂ ಪಂಜಾಬಿ ನಟಿ ಇಶಾ ರಿಖಿ (Isha Rikhi) ಅಧಿಕೃತವಾಗಿ ವಿಚ್ಛೇದನ ಘೋಷಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಅತ್ಯಾಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದ ಈ ಜೋಡಿಯ ವಿಚ್ಛೇದನದ ಬಗ್ಗೆ ಕಳೆದೊಂದು ತಿಂಗಳಿಂದಲೇ ಗಾಸಿಪ್ ಕೇಳಿಬರುತ್ತಿತ್ತು. ಇದೀಗ ಬಾದಷಾ, ಇಶಾ ರಿಖಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ವಿಚ್ಛೇದನ (Divorce) ಘೋಷಿಸಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್‌ನಲ್ಲಿ ಹೊಸ ದಾಖಲೆ – ಏಕಕಾಲದಲ್ಲಿ ನಾಲ್ಕು ಭಾಷೆಯ ಆವೃತ್ತಿ ಪ್ರಾರಂಭ

ಪೋಸ್ಟ್‌ನಲ್ಲಿ ಏನಿದೆ?
ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ತೀರ್ಮಾನಿಸಿದ್ದೇವೆ. ಮುಂದಿನ ಜೀವನವನ್ನು ನಮ್ಮಿಷ್ಟದಂತೆ ಬದುಕಲು ನಿರ್ಧರಿಸಿದ್ದೇವೆ. ನಾವಿಬ್ಬರೂ ಪರಸ್ಪರ ಗೌರವದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಈ ಸಮಯದಲ್ಲಿ ಎಲ್ಲರೂ ನಮ್ಮ ಖಾಸಗಿತನಕ್ಕೆ ಗೌರವ ನೀಡಬೇಕೆಂದು ವಿನಂತಿ. ಈ ವಿಷಯದ ಬಗ್ಗೆ ನಾವು ಕೊಡುವ ಕೊನೆಯ ಹೇಳಿಕೆ ಇದಾಗಿದೆ. ದಯವಿಟ್ಟು ನಮ್ಮ ಸಂಬಂಧದ ಬಗ್ಗೆ ಇನ್ನು ಮುಂದೆ ಯಾವುದೇ ರೀತಿಯ ಊಹಾಪೋಹಗಳನ್ನು ಸೃಷ್ಟಿಸಬೇಡಿ ಎಂದು ಪ್ರಾಮಾಣಿಕವಾಗಿ ಕೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕಳೆದ ಜುಲೈ ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದನದ ಕುರಿತ ವಿಷಯಗಳು ಹರಿದಾಡುತ್ತಿದ್ದವು. ಅದೇ ಸಮಯದಲ್ಲಿ ಇಶಾ ರಿಖಿ ಮತ್ತು ಬಾದಷಾ ತಮ್ಮ ಫೋಟೋಗಳ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಪ್ರತಿ ಬಿರುಗಾಳಿಯೂ ಒಂದು ಪಾಠ. ಪ್ರತಿ ಪ್ರಾರ್ಥನೆಯು ಒಂದು ಭರವಸೆ ಎಂದು ಶೀರ್ಷಿಕೆ ಬರೆದು, ಹಾರ್ಟ್‌ಬ್ರೇಕ್ ಎಮೋಜಿ ಹಾಕಿದ್ದರು. ಇದೇ ಪೋಸ್ಟ್‌ನಿಂದಲೇ ಸ್ವರ್ಗದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡುವಂತೆ ಮಾಡಿತ್ತು.
ಇದು ಬಾದಷಾ ಅವರ ಎರಡನೇ ವಿವಾಹವಾಗಿದೆ. ಅವರು ಈ ಮೊದಲು ಜಾಸ್ಮಿನ್ ಮಸಿಹ್ (Jasmine Masih) ಅವರನ್ನು ವಿವಾಹವಾಗಿದ್ದರು. ಆ ದಂಪತಿ 2020ರಲ್ಲಿ ವಿಚ್ಛೇದನ ಪಡೆದಿದ್ದರು. ಅವರಿಗೆ ಜೆಸ್ಸೆಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದಾಳೆ.ಇದನ್ನೂ ಓದಿ: ‘ಟಾಸ್’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್; ಮಾಸ್ ಅವತಾರದಲ್ಲಿ ಅರ್ಜುನ್ ದೇವ್

