ಬೆಂಗಳೂರು: ಕೋರಮಂಗಲ ವ್ಯಾಪ್ತಿಯ ಕೋ-ಲಿವಿಂಗ್ ಪಿಜಿಗಳಲ್ಲಿ (Co Living PG) ವಾಸಿಸುವ ಯುವತಿಯರ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್ಗಳನ್ನು ಕದ್ದು, ಅವುಗಳನ್ನು ವಿಚಿತ್ರ ರೀತಿಯಲ್ಲಿ ಜೋಡಿಸಿ ಲೈಂಗಿಕ ತೃಪ್ತಿ ಪಡೆಯುತ್ತಿದ್ದ ಕಾಮುಖನೊಬ್ಬನನ್ನು ಕೋರಮಂಗಲ ಪೊಲೀಸರು (Koramangala Police) ಬಂಧಿಸಿದ್ದಾರೆ.
ಆರೋಪಿಯನ್ನ ಗಿರಿರಾಜ್ ಎಂದು ಗುರುತಿಸಲಾಗಿದ್ದು, ಈತ ಪ್ರತಿಷ್ಠಿತ ಸಂಸ್ಥೆಯಲ್ಲಿ ಆಡಿಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಒಳಉಡುಪು ಧರಿಸದೇ ಪೋಸ್ ಕೊಟ್ಟ ಖುಷಿ ಮುಖರ್ಜಿ – ಅದೆಷ್ಟು ಬಾರಿ ಎದೆಗೆ ಬೆಂಕಿ ಹಚ್ತೀರಿ ಅಂದ್ರು ಫ್ಯಾನ್ಸ್

ಪಿಜಿಯಲ್ಲೇ ನಡೆಯುತ್ತಿತ್ತು ವಿಚಿತ್ರ ಕಳ್ಳತನ
ಕೋರಮಂಗಲದ ಖಾಸಗಿ ಪಿಜಿಯೊಂದರಲ್ಲಿ ಪದೇಪದೇ ಯುವತಿಯರ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್ಗಳು ಕಾಣೆಯಾಗುತ್ತಿದ್ದವು. ಹೊರಗಿನ ವ್ಯಕ್ತಿಯೊಬ್ಬ ಪಿಜಿಗೆ ಬಂದು ಕಳ್ಳತನ ಮಾಡಿರುವ ಯಾವುದೇ ಸುಳಿವು ಆರಂಭದಲ್ಲಿ ಪೊಲೀಸರಿಗೆ ಸಿಕ್ಕಿರಲಿಲ್ಲ. ಈ ಕುರಿತು ಪಿಜಿಯಲ್ಲಿದ್ದ ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಪಿಜಿಯಲ್ಲಿದ್ದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನ ಕೂಲಂಕುಷವಾಗಿ ಪರಿಶೀಲಿಸಿದ್ದಾರೆ.
ಪಿಜಿಯ ಮೊದಲ ಮಹಡಿಯಲ್ಲಿ ಮಹಿಳೆಯರು ಹಾಗೂ ಎರಡನೇ ಮಹಡಿಯಲ್ಲಿ ಪುರುಷರು ವಾಸಿಸುತ್ತಿದ್ದರು. ತನಿಖೆ ವೇಳೆ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನೇ ಮೊದಲ ಮಹಡಿಯ ರೂಮ್ಗಳಿಗೆ ತೆರಳಿ ಕಳ್ಳತನ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ರೂಮ್ನಲ್ಲಿ ಯಾರೂ ಇಲ್ಲದಿರುವುದನ್ನ ಗಮನಿಸಿ ಆರೋಪಿ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್ಗಳನ್ನ ಕದಿಯುತ್ತಿದ್ದ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ಸೊಂಟ ಕಾಣಿಸುವಂತೆ ಹಸಿರು ಸೀರೆಯುಟ್ಟು ಬಂದ ಉರ್ಫಿ – ಒಳಉಡುಪು ಎಲ್ಲಿ ಹೋಯ್ತು ಅಂದ ನೆಟ್ಟಿಗರು
ಕದ್ದ ವಸ್ತುಗಳನ್ನು ವಿಚಿತ್ರವಾಗಿ ಜೋಡಿಸಿ ಆನಂದ!
ಪೊಲೀಸರು ಹೇಳುವಂತೆ, ಕದ್ದ ವಸ್ತುಗಳನ್ನು ತನ್ನ ರೂಮ್ನಲ್ಲಿ ವಿಚಿತ್ರ ರೀತಿಯಲ್ಲಿ ಜೋಡಿಸಿಕೊಂಡು ಲೈಂಗಿಕವಾಗಿ ತೃಪ್ತಿ ಪಡೆಯುತ್ತಿದ್ದ. ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
