ಬೆಂಗಳೂರು: ನಡುರಸ್ತೆಯಲ್ಲೇ ಟಾಟಾ ಏಸ್ ವಾಹನವೊಂದು ಧಗಧಗನೆ ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ದೊಮ್ಮಲೂರಿನ ಫ್ಲೈ ಓವರ್ ಬಳಿ ನಡೆದಿದೆ.
ಆಕಸ್ಮಿಕವಾಗಿ ಟಾಟಾ ಏಸ್ ವಾಹನಕ್ಕೆ ಬೆಂಕಿ ಬಿದ್ದಿದೆ. ಬಳಿಕ ಕ್ಷಣ ಮಾತ್ರದಲ್ಲೇ ವಾಹನ ಸುಟ್ಟು ಭಸ್ಮವಾಗಿದೆ. ದೃಷ್ಟವಶತ್ ಘಟನೆಯಲ್ಲಿ ಯಾರಿಗೂ ಪ್ರಾಣಪಾಯವಾಗಿಲ್ಲ. ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.