ಬಾಗಲಕೋಟೆ: ಜಿಲ್ಲೆಯ ಜಮಖಂಡಿ(Jamkhandi Police) ನಗರದಲ್ಲಿ ನಗರಸಭೆ ಹಾಗೂ ಸ್ಥಳೀಯ ಆಡಳಿತದ ವತಿಯಿಂದ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಹಲವು ಬಡ ಕುಟುಂಬಗಳು ಆಶ್ರಯ ಕಳೆದುಕೊಂಡು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ನಗರದ ಪ್ರಮುಖ ರಸ್ತೆಯಾಗಿರುವ ವಿಜಯಪುರ ರಸ್ತೆ ಪಕ್ಕದಲ್ಲಿ ಹಾಗೂ ದೇಸಾಯಿ ಸರ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ವಿಸ್ತರಣೆ ಮತ್ತು ಅತಿಕ್ರಮಣ ತೆರವುಗೊಳಿಸುವ ಕಾರ್ಯಕ್ಕೆ ಆಡಳಿತ ಮಂಡಳಿ ಮುಂದಾಗಿದೆ. ಆದರೆ ಈ ನಿರ್ಧಾರದಿಂದಾಗಿ ದಶಕಗಳಿಂದಲೂ ಇಲ್ಲಿಯೇ ಸಣ್ಣಪುಟ್ಟ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಬಡ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ.
ತೆರವು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಗಳು, ಆಡಳಿತದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾರಿ ಅಪ್ಪ, ಸರ್ಕಾರಿ ಕೆಲಸಕ್ಕಾಗಿ 50 ಬಾರಿ ಪ್ರಯತ್ನಿಸಿದೆ ಆದ್ರೆ ಆಗ್ಲಿಲ್ಲ – ಬಿ.ಟೆಕ್ ಗೋಲ್ಡ್ ಮೆಡಲಿಸ್ಟ್ ಆತ್ಮಹತ್ಯೆ
ನಾವು ಹಲವು ವರ್ಷಗಳಿಂದ ಇಲ್ಲೇ ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ದಿನವೂ ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ಬಡವರು ನಾವು. ದಿಢೀರನೆ ಮನೆಗಳನ್ನು ತೆರವುಗೊಳಿಸಿದರೆ ನಾವು ಮಕ್ಕಳೊಂದಿಗೆ ಬೀದಿಗೆ ಬೀಳಬೇಕಾಗುತ್ತದೆ. ಆಡಳಿತ ಮಂಡಳಿಯು ನಮಗೆ ಮೊದಲೇ ಪರ್ಯಾಯ ಮನೆ ಅಥವಾ ವಸತಿ ವ್ಯವಸ್ಥೆಯನ್ನು ಒದಗಿಸಿ, ಆನಂತರ ಮನೆಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಇದನ್ನೂ ಓದಿ: ನನ್ನನ್ನು ಡಾಕ್ಟರ್ ಮಾಡಿದ್ದು ಅವರೇ – ಚೆನ್ನಮ್ಮರನ್ನು ನೆನೆದು ಭಾವುಕರಾದ ಡಾ.ಆನಂದ್
