ಹಾಸನ: ಚೆನ್ನಮ್ಮ (Chennamma H.D Devegowda) ನನಗೆ ಎರಡನೇ ತಾಯಿಯಂತೆ ಇದ್ದರು. ನನ್ನನ್ನು ಡಾಕ್ಟರ್ ಮಾಡಿದ್ದು ಅವರೇ ಎಂದು ಚೆನ್ನಮ್ಮ ಅವರ ಸಂಬಂಧಿ ಹಾಗೂ ಒಡನಾಡಿ ಡಾ.ಆನಂದ್ ( Dr.Anand) ಹೇಳಿದ್ದಾರೆ.
ಹಾಸನದಲ್ಲಿ (Hassan) ʻಪಬ್ಲಿಕ್ ಟಿವಿʼ ಜೊತೆ ಅವರು ಮಾತನಾಡಿದರು. ಈ ವೇಳೆ ವಿಧಿವಶರಾದ ಚೆನ್ನಮ್ಮ ಅವರೊಂದಿಗಿನ ಒಡನಾಟದ ಬಗ್ಗೆ ಮಾಹಿತಿ ನೀಡಿದರು. ನನ್ನ ಅವರ ಒಡನಾಟ 40 ವರ್ಷಕ್ಕೂ ಅಧಿಕವಾದದ್ದು. ನಾನು ಚಿಕ್ಕವನಿದ್ದಾಗ ನನ್ನ ಹುಟ್ಟುಹಬ್ಬಕ್ಕೆ ಊಟದ ಬಾಕ್ಸ್ ಕೊಟ್ಟಿದ್ದರು. ನನ್ನ ಬಳಿ ಆ ಬಾಕ್ಸ್ ಇಂದಿಗೂ ಹಾಗೇ ಇದೆ ಎಂದು ನೆನೆದು ಭಾವುಕರಾದರು. ಇದನ್ನೂ ಓದಿ: ಹೊಳೆನರಸೀಪುರದಲ್ಲಿ ಇಂದು ಚೆನ್ನಮ್ಮ ಅಂತ್ಯಕ್ರಿಯೆ – ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ವಿಧಿವಿಧಾನ

ನನ್ನನ್ನು ಓದಿಸಿ, ಎಲ್ಲಾ ಕೊಡಿಸಿ, ಡಾಕ್ಟರ್ ಮಾಡಿದ್ದು ಅವರೇ. ಆನಂದ ಓದು, ನೀನು ಓದಬೇಕು. ನಾನು ಓದುಸ್ತೀನಿ ಅಂತ ಓದಿಸಿದರು. ನಾನು ಎಂಬಿಬಿಎಸ್, ಎಂಎಸ್ ಮಾಡಿ ಜನರಲ್ ಸರ್ಜನ್ ಆಗಲು ಚೆನ್ನಮ್ಮ ಅವರೇ ಕಾರಣ. ಏನೋ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ.
ಆಗೆಲ್ಲಾ ಕಾರು ಇರಲಿಲ್ಲ. ನಾನು ಚೆನ್ನಮ್ಮ ಅವರ ಜೊತೆ ಬಸ್‌ನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದೆ. ಆಗ ನಿನಗೆ ಏನು ಬೇಕು ತಗೋ ಎಂದು ಕೊಡಿಸುತ್ತಿದ್ದರು. ಕುಮಾರಣ್ಣ ನಮ್ಮನ್ನ ಕರೆದೊಯ್ಯುವಾಗ ನನಗೆ ದೋಸೆ ಕೊಡಿಸುತ್ತಿದ್ದರು. ಆ ಘಟನೆಗಳೆಲ್ಲಾ ಕಣ್ಣಿಗೆ ಕಟ್ಟಿದಂತೆ ಇದೆ. ನನಗೆ ಅವರು ದೈವಕ್ಕೆ ಸಮಾ ಎಂದರು. ಇದನ್ನೂ ಓದಿ: ರೇವಣ್ಣ ಸಲಹೆಯಂತೆ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಪೆರೋಲ್ ಸಲ್ಲಿಸದ ಪ್ರಜ್ವಲ್
