ನ್ಯೂಯಾರ್ಕ್: 2026 ರ FIFA ವಿಶ್ವಕಪ್‌ನ (FIFA World Cup) ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ (Argentina) ತಂಡವು ಸ್ಪೇನ್ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್‌ಗಳು ಅಟ್ಲಾಂಟಾದಲ್ಲಿ ನಡೆದ ಹೈವೋಲ್ಟೇಜ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು 2-0 ಅಂತರದಿಂದ ಮಣಿಸಿತು. ಆ ಮೂಲಕ ಸತತ ಎರಡನೇ ಟ್ರೋಫಿಗಾಗಿ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ ಇಟ್ಟಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ ಪರ ಮೆಸ್ಸಿ (Lionel Messi) ಮ್ಯಾಜಿಕ್ ಮಾಡಿದರು. ಮೆಸ್ಸಿ ತಮ್ಮ 2 ನಿರ್ಣಾಯಕ ಅಸಿಸ್ಟ್‌ಗಳ ಮೂಲಕ ತಂಡ ಎರಡು ಗೋಲು ಗಳಿಸಲು ಸಹಾಯ ಮಾಡಿದರು. ಇದನ್ನು ಕ್ರಮವಾಗಿ ಎಂಜೊ ಫೆರ್ನಾಂಡಿಸ್ ಮತ್ತು ಲೌಟಾರೊ ಮಾರ್ಟಿನೆಜ್ ಗೋಲುಗಳಾಗಿ ಪರಿವರ್ತಿಸಿದರು. ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಮಿಂಚಿದ ಎರ್ಲಿಂಗ್ ಹಾಲೆಂಡ್; ನಾರ್ವೆಯಲ್ಲಿ 550 ಕ್ಕೂ ಹೆಚ್ಚು ಮಕ್ಕಳಿಗೆ ಹಾಲೆಂಡ್ ಹೆಸರಿಟ್ಟ ಪೋಷಕರು
ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಮೊದಲಾರ್ಧದಲ್ಲಿ ಗೋಲು ಗಳಿಸಲು ಇತ್ತಂಡಗಳು ಹೆಣಗಾಡಿದವು. ಆದರೆ, ದ್ವಿತೀಯಾರ್ಧದಲ್ಲಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿತು. 55ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಕೇನ್ ನೀಡಿದ ಅಸಿಸ್ಟ್ ಅನ್ನು ಆಂಥೋನಿ ಗಾರ್ಡನ್ ಗೋಲಾಗಿ ಪರಿವರ್ತಿಸುತ್ತಾರೆ. ಅರ್ಜೆಂಟೀನಾ ವಿರುದ್ಧ 1-0 ಅಂತರದ ಮುನ್ನಡೆ ಸಾಧಿಸುತ್ತಾರೆ.
ಅರ್ಜೆಂಟೀನಾ ಕೊನೆ ಹಂತದ ವರೆಗೂ ಒಂದು ಗೋಲನ್ನು ಗಳಿಸಲು ಸಾಧ್ಯವಾಗುವುದೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಇಂಗ್ಲೆಂಡ್ ಭದ್ರಕೋಟೆ ಭೇದಿಸುವುದು ಸಾಧ್ಯವಾಗಲ್ಲ. ರೋಚಕ ಘಟ್ಟದಲ್ಲಿ ಮೆಸ್ಸಿ ಮ್ಯಾಜಿಕ್‌ನಿಂದ ತಂಡ ಗೋಲು ಗಳಿಸುತ್ತದೆ. 85ನೇ ನಿಮಿಷದಲ್ಲಿ ಮೆಸ್ಸಿ ನಿಖರವಾದ ಪಾಸ್ ನೀಡುತ್ತಾರೆ. ಎಂಜೊ ಫೆರ್ನಾಂಡಿಸ್ ಅದನ್ನು ಸುಂದರ ಗೋಲಾಗಿ ಪರಿವರ್ತಿಸಿ ಇಂಗ್ಲೆಂಡ್ ವಿರುದ್ಧ 1-1ರ ಸಮಬಲ ಸಾಧಿಸಲು ನೆರವಾಗುತ್ತಾರೆ.
ಇದಾದ ಕೆಲವೇ ನಿಮಿಷಗಳಲ್ಲಿ ಮೆಸ್ಸಿ ಮತ್ತೊಂದು ಪಾಸ್ ನೀಡುತ್ತಾರೆ. ಅದನ್ನು ಲೌಟಾರೊ ಮಾರ್ಟಿನೆಜ್ ಗೋಲ್‌ಗೆ ತಲುಪಿಸುತ್ತಾರೆ. ಆಗ ತಂಡಕ್ಕೆ ಗೆಲುವು ಖಚಿತವಾಗುತ್ತದೆ. ಕೇವಲ 3 ನಿಮಿಷಗಳ ಅಂತರದಲ್ಲಿ 2 ಗೋಲು ಗಳಿಸಿ ಅರ್ಜೆಂಟೀನಾ ಅಭಿಮಾನಿಗಳನ್ನು ಉನ್ಮಾದಕ್ಕೆ ದೂಡುತ್ತದೆ. ಇದನ್ನೂ ಓದಿ: FIFA World Cup | ಫ್ರಾನ್ಸ್ ಮಣಿಸಿ ಫೈನಲ್‌ಗೆ ಸ್ಪೇನ್ ಎಂಟ್ರಿ
ಇಂಗ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿದ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತೆ ಫೈನಲ್‌ಗೇರಿದೆ. ಇತ್ತ ಫೈನಲ್‌ನ ಮುನ್ನಾದಿನದ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ಫ್ರಾನ್ಸ್ ಅನ್ನು ಎದುರಿಸಲಿದೆ.
